×
Ad

600 ಬಿಪಿಎಲ್ ಪಡಿತರ ದಾರರಿಗೆ ಒಂದು ಪಡಿತರ ಅಂಗಡಿ: ಯು.ಟಿ.ಖಾದರ್

Update: 2025-02-07 14:41 IST

 ಉಳ್ಳಾಲ ಪಡಿತರ ಅಂಗಡಿ ಮತ್ತು ‌ಆಹಾರಕ್ಕೆ ಸಂಬಂಧಿಸಿ ಈಗಾಗಲೇ ಹೊಸ ನಿಯಮ ಜಾರಿಯಲ್ಲಿದ್ದು, 600 ಬಿಪಿಎಲ್ ಪಡಿತರ ದಾರರಿಗೆ ಒಂದು ನ್ಯಾಯ ಬೆಲೆ ಅಂಗಡಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ಕುಂಪಲದಲ್ಲಿ ಆರಂಭಗೊಂಡಿರುವ ನೂತನ ಪಡಿತರ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

ಸರ್ಕಾರ ದ ಸವಲತ್ತುಗಳನ್ನು ಜನರಿಗೆ ಪ್ರಾಮಾಣಿಕ ಮತ್ತು ಬದ್ಧತೆಯಿಂದ ತಲುಪಿಸುವ ಕೆಲಸ ಆಗಬೇಕು. ಡಿಪೋದಿಂದ ಬಂದ ಆಹಾರ ಕಳಪೆ ಮಟ್ಟದ್ದು ಆಗಿದ್ದರೆ ಅದನ್ನು ತಿರಸ್ಕರಿಸಿ.ಉತ್ತಮ ಗುಣಮಟ್ಟದ ಆಹಾರ ಮಾತ್ರ ಬಿಪಿಎಲ್ ಫಲಾನುಭವಿಗಳಿಗೆ ನೀಡಿ ಎಂದು ಸಲಹೆ ನೀಡಿದರು.

 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ತೀಯಾ ಸೇವಾ ಸಹಕಾರ ಸಂಘದ ಉಪಾಧ್ಯಕ್ಷಸುನಿಲ್ ಉಚ್ಚಿಲ್ , ಮುಖ್ಯಕಾರ್ಯನಿರ್ವಹಣಾಅಧಿಕಾರಿ ಯಶವಂತಿ ಜೆ ಉಚ್ಚಿಲ್ , ನಿರ್ದೇಶಕರುಗಳಾದ ಸೂರಜ್ ಮಾಡೂರು ,ಮನೋಜ್ ,ಅಭಿಜಿತ್ ಹರಿಣಾಕ್ಷಿ ರಜನಿ ಹರೀಶ್ ,ಲತಾ ವಿಸ್ವಾನಾಥ್ ಮತ್ತಿತರರು ಉಪಸ್ಥಿತರಿದ್ದರು.

ತೀಯಾ ಸೇವಾ ಸಹಕಾರ ಸಂಘದಅಧ್ಯಕ್ಷ ಎಂ. ದಿನೇಶ್ ಕುಂಪಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News