ನ.28ರಂದು ಆಪರೇಶನ್ ಲಂಡನ್ ಕೆಫೆ ಚಲನಚಿತ್ರ ತೆರೆಗೆ
ಮಂಗಳೂರು, ನ.22: ಬಹುನಿರೀಕ್ಷೆಯ ಆಪರೇಷನ್ ಲಂಡನ್ ಕೆಫೆ ಚಲನಚಿತ್ರವು ಮರಾಠಿ, ಕನ್ನಡ, ಹಿಂದಿ ಭಾಷೆಯಲ್ಲಿ ನ.28ರಂದು ಸುಮಾರು 300ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಯುವನಟ ಕವೀಶ್ ಶೆಟ್ಟಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ನಿರ್ದೇಶಕ ಸಡಗರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅರ್ಜುನ್ ಕಾಪಿಕಾಡ್, ಮೇಘಾ ಶೆಟ್ಟಿ ಉತ್ತಮ ಪಾತ್ರದಲ್ಲಿ ಮಿಂಚಿಸಿದ್ದಾರೆ. ಮರಾಠಿ ಚಿತ್ರರಂಗದ ಶಿವಾನಿ ಸುರ್ವೆ, ವಿರಾಟ್ ಮಡ್ಕೆ, ಪ್ರಸಾದ್ ಖಾಂಡೇಕರ್ ಮುಂತಾದವರು ಚಾಲೆಂಜಿಗ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಕ್ಸಲ್ ಜೀವನಾಧಾರಿತ ಸಿನಿಮಾ ಇದಾಗಿದ್ದು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ನಾನಾ ಕಡೆಗಳಲ್ಲಿ ಚಿತ್ರೀಕರಣಗೊಂಡಿದೆ ಎಂದವರು ಹೇಳಿದರು.
ಚಿತ್ರದಲ್ಲಿ ಪಾಂಶು ಝಾ ಸಂಗೀತ, ಆರ್.ಡಿ. ನಾಗಾರ್ಜುನ್ ಛಾಯಾಗ್ರಹಣ, ವರದರಾಜ್ ಕಾಮತ್ ಕಲೆ, ವಿಕ್ರಂ ಮೊರ್, ಮಾಸ್ ಮಾದ ಮತ್ತು ಅರ್ಜುನ್ ರಾಜ್ ಸಾಹಸ, ಕವಿರಾಜ್, ಡಾ. ನಾಗೇಂದ್ರ ಪ್ರಸಾದ್ ಮತ್ತು ಸಡಗರ ರಾಘವೇಂದ್ರ ಸಾಹಿತ್ಯವಿದೆ. ಅನಿರುದ್ಧ್ ಶಾಸ್ತ್ರಿ, ಬ್ರಿಜೇಶ್ ಶಾಂಡಿಲ್ಯ, ಐಶ್ವರ್ಯ ರಂಗರಾಜನ್, ಪೃಥ್ವಿ ಭಟ್ ಮತ್ತು ಲಕ್ಷ್ಮೀ ಬೆಳ್ಮಣ್ಣು ಸಾಹಿತ್ಯಕ್ಕೆ ಇಂಪಾದ ಸ್ವರ ಸೇರಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ಅರ್ಜುನ್ ಕಾಪಿಕಾಡ್ ಉಪಸ್ಥಿತರಿದ್ದರು.