×
Ad

ನಾಳೆ ಪಿ.ಎ. ಇಬ್ರಾಹೀಂ ಹಾಜಿ ಸ್ಮರಣಾರ್ಥ ರಕ್ತದಾನ ಶಿಬಿರ

Update: 2025-01-20 14:50 IST

ಕೊಣಾಜೆ ನಡುಪದವಿನ ಪಿ.ಎ. ಫಾರ್ಮಸಿ ಕಾಲೇಜು ಇದರ ರಾಷ್ಟೀಯ ಸೇವಾ ಯೋಜನಾ ಘಟಕದ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಮಂಗಳೂರು ಇದರ ಸಹಯೋಗದೊಂದಿಗೆ ಡಾ. ಪಿ.ಎ. ಇಬ್ರಾಹೀಂ ಹಾಜಿ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವನ್ನು ನಡುಪದವಿನ ಪಿ.ಎ. ಕ್ಯಾಂಪಸ್ ನಲ್ಲಿ ಜ21, ಮಂಗಳವಾರ ಆಯೋಜಿಸಲಾಗಿದೆ.

ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ, ಎಚ್.ಆರ್. ತಿಮ್ಮಯ್ಯ, ಪಿ.ಎ. ಎಜ್ಯಕೇಶನಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹೀಮ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಸೆಂಟರ್ ಮಂಗಳೂರು ಇದರ ವೈದ್ಯಾಧಿಕಾರಿ ಡಾ. ಸುಕೇಶ್, ರೆಡ್ ಕ್ರಾಸ್ ಸೊಸೈಟಿಯ ಜಿಲ್ಲಾ ಸಂಯೋಜಕ ಪ್ರವೀಣ್ ಕುಮಾರ್, ಇಕೋಲ್ಯಾಬ್ ಕೆ.ಎಸ್.ಎ. ಇದರ ಮಾಜಿ ಮಾರ್ಕೆಟಿಂಗ್ ಮೆನೇಜರ್ ಅಬ್ಬಾಸ್ ಉಚ್ಚಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎನ್.ಎಸ್.ಎಸ್. ಸಂಯೋಜಕ ಡಾ.ಮುಹಮ್ಮದ್ ಮುಬೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News