×
Ad

ಪಣಂಬೂರು | ಸಮುದ್ರ ತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ; ಕೊಲೆ ಶಂಕೆ

Update: 2024-09-22 09:49 IST

ಪಣಂಬೂರು: ಇಲ್ಲಿನ ತೋಟ ಬೆಂಗ್ರೆ ಅಳಿವೆಬಾಗಿಲು ಸಮೀಪದ ಸಮುದ್ರ ತೀರದ ಬಳಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ಅಮೀನಗಡ ನಿವಾಸಿ ಮುತ್ತು ಬಸವರಾಜ್ ವಡ್ಡರ್ ಆಲಿಯಾಸ್ ಮುದುಕಪ್ಪ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಇವರು ಹಲವು ವರ್ಷಗಳಿಂದ ತೋಟ ಬೆಂಗ್ರೆ ಎಂಬಲ್ಲಿನ ಬಾಡಿಗೆ ಮನೆಯೊಂದರಲ್ಲಿ ಒಬ್ಬರೇ ವಾಸವಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮೃತದೇಹದ ಬಲ ಕಾಲು, ಬಲ ಕೈ ಹಾಗೂ ಹಣೆಯ ಭಾಗದಲ್ಲಿ ರಕ್ತ ಗಾಯ ಇದ್ದು, ಮೇಲ್ನೋಟಕ್ಕೆ ಕೊಲೆ ಮಾಡಿರುವ ರೀತಿ ಕಂಡುಬರುತ್ತಿದೆ. ಮೃತರು ವಿಪರೀತ ಕುಡಿತದ ಚಟ ಹೊಂದಿದ್ದು, ಯಾರೊಂದಿಗೋ ಜಗಳವಾಡಿಕೊಂಡು ಕೊಲೆಗೀಡಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪಣಂಬೂರು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News