×
Ad

ಪಾಣೆಮಂಗಳೂರು: ಆ.1ರಂದು 'ದಾಈ ಕಾನ್ಫರೆನ್ಸ್ 2023'

Update: 2023-07-31 11:38 IST

ಬಂಟ್ವಾಳ, ಜು.31: SKSSF ದಕ್ಷಿಣ ಕನ್ನಡ ಜಿಲ್ಲೆ (ವೆಸ್ಟ್) ಇಬಾದ್ ವಿಂಗ್ ಆಯೋಜಿಸುವ 'ದಾಈ ಕಾನ್ಫರೆನ್ಸ್ 2023' ಕಾರ್ಯಕ್ರಮವು ಆಗಸ್ಟ್ 1ರಂದು ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ನಡೆಯಲಿದೆ .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮೀರ್ ತಂಙಳ್ ವಹಿಸುವರು.

ಮಾದಕ ದ್ರವ್ಯಗಳ ವ್ಯಸನಗಳಿಂದ ಹೇಗೆ ಸಮಾಜವನ್ನು ಮುಕ್ತಿಗೊಳಿಸಬಹುದು ಹಾಗೂ ಆತ್ಮೀಯ ಸಂಗಮಗಳು ಎಂಬ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ರಫೀಕ್ ಚೆನ್ನೈ, ತಾಜುದ್ದೀನ್ ದಾರಿಮಿ ಪಡನ್ನ, ಸ್ವದಕತುಲ್ಲಾ ಫೈಝಿ, ಅಬ್ದುಲ್ಲಾ ರಹ್ಮಾನಿ ಉಪ್ಪಳ ಹಾಗೂ ಇರ್ಷಾದ್ ದಾರಿಮಿ ಮಿತ್ತಬೈಲು ವಿಚಾರ ಮಂಡಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News