×
Ad

ಪಂಜದ ಬಸ್ತಿಕಾಡು ಪರಿಸರದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ

Update: 2024-10-19 23:21 IST

ಸುಳ್ಯ: ಪಂಜ ಪರಿಸರದಲ್ಲಿ ಕೆಲವು ದಿನಗಳಿಂದ ಬೇರೆ ಬೇರೆ ಕಡೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗುತ್ತಿದ್ದು, ಪಂಜ ಸಮೀಪದ ಬಸ್ತಿಕಾಡು ಪರಿಸರದಲ್ಲಿ ಶುಕ್ರವಾರ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ.

ಪಂಜ ಹೊಳೆ ದಾಟಿ ಬಸ್ತಿಕಾಡು ಮೂಲಕ ಪಲ್ಲತ್ತಡ್ಕ ಕಡೆ ಹೋಗಿರುವ ಬಗ್ಗೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಅಲ್ಲಿಯೇ ಪಕ್ಕದ ಚಾಳೆಗುಳಿ ಎಂಬಲ್ಲಿ ಕೂಡ ಹೆಜ್ಜೆ ಗುರುತು ಕಂಡುಬಂದಿದೆ. ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅ.16 ರಂದು ಮುಂಜಾನೆ ಕೂತ್ಕಂಜ ಗ್ರಾಮದ ಕುದ್ವ ಎಂಬಲ್ಲಿ ಕೃಷಿ ತೋಟದಲ್ಲಿ ಹಲವು ಕಡೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಮರುದಿನ ಪಂಜ ಸಮೀಪದ ಕುದ್ಮಾರು ಬೆಟ್ಟು ಎಂಬಲ್ಲಿನ ತೋಟದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News