×
Ad

ಪಾವೂರು ಗ್ರಾ.ಪಂ: ಅಧ್ಯಕ್ಷರಾಗಿ ಮಜೀದ್, ಉಪಾಧ್ಯಕ್ಷರಾಗಿ ಮೆಹರುನ್ನಿಸಾ ಆಯ್ಕೆ

Update: 2023-08-10 22:54 IST

ಕೊಣಾಜೆ: ಪಾವೂರು ಗ್ರಾಮ ಪಂಚಾಯತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಎಸ್ ಡಿಪಿ ಐ ಅವರ ನಡುವೆ ಟೈ ಆಗುವ ಮೂಲಕ ತೀವ್ರ ಕುತೂಹಲ‌ ಕೆರಳಿಸಿದ್ದು, ಬಳಿಕ , ಗ್ರಾಮ‌ ಪಂಚಾಯಿತಿ ಅಧ್ಯಕ್ಷ ಸ್ಥಾನ ಅದೃಷ್ಟ ಚೀಟಿಯಲ್ಲಿ ಕಾಂಗ್ರೆಸ್ ಗೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ ಡಿಪಿಐ ತೆಕ್ಕೆಗೆ ಹೋಗಿದೆ.

ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಸಾತ್ಕೋ ಮಜೀದ್ ಮತ್ತು ಉಪಾಧ್ಯಕ್ಷರಾಗಿ ಎಸ್ ಡಿಪಿಐ ಬೆಂಬಲಿತೆ ಮೆಹರುನ್ನಿಸಾ ಆಯ್ಕೆಯಾದರು.

15 ಸದಸ್ಯ ಬಲದ ಪಾವೂರು ಗ್ರಾಮ ಪಂಚಾಯಿತಿಯಲ್ಲಿ ಎಸ್ ಡಿಪಿಐ 6, ಕಾಂಗ್ರೆಸ್ 5, ಬಿಜೆಪಿ 2 ಮತ್ತು ಎರಡು ಸ್ಥಾನವನ್ನು ಪಕ್ಷೇತರರು ಹೊಂದಿದ್ದಾರೆ. ಕಳೆದ ಬಾರಿ ಪಕ್ಷೇತರರ ಬೆಂಬಲದೊಂದಿಗೆ ಎಸ್ ಡಿಪಿಐ ಅಧಿಕಾರ ನಡೆಸಿತ್ತು.

ಈ ಬಾರಿ ಎಸ್ ಡಿಪಿಐ ಬೆಂಬಲದಿಂದ ಪಕ್ಷೇತರ ಅಭ್ಯರ್ಥಿ ವಲೇರಿಯನ್ ಡಿಸೋಜ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೆಹರುನ್ನಿಸಾ, ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಸಾತ್ಕೋ ಮಜೀದ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರವಿಕಲಾ ಸ್ಪರ್ಧಿಸಿದ್ದರು. ಚುನಾವಣೆ ನಡೆದಾಗ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಏಳು ಮತಗಳನ್ನು ಪಡೆದಿದ್ದು ಒಂದು ಮತ ಅಸಿಂಧುಗೊಂಡಿತು. ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳೂ ಏಳು ಮತಗಳನ್ನು ಪಡೆದರೆ ಒಬ್ಬರು ಮತ ಚಲಾಯಿಸದ ಕಾರಣ ಸಮ ಬಲಗೊಂಡಿದ್ದು ಇದರಿಂದಾಗಿ ಅದೃಷ್ಟ ಚೀಟಿ ಎತ್ತಲಾಯಿತು.

ಪಂಚಾಯಿತಿಯಲ್ಲಿ ಕಾಂಗ್ರೆಸ್ ಐದು ಸ್ಥಾನ ಹೊಂದಿದೆ. ಕಳೆದ ಬಾರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ಕಾಂಗ್ರೆಸ್ ಐದು ಸ್ಥಾನಗಳನ್ನು ಮಾತ್ರ ಪಡೆದಿದ್ದರೆ, ಈ ಬಾರಿ ಏಳು ಸ್ಥಾನ ಪಡೆದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News