×
Ad

ಖಾಸಗಿ ಬಸ್ ನಿರ್ವಾಹಕನಿಗೆ ಹಲ್ಲೆ ಆರೋಪ: ಮೂವರ ವಿರುದ್ಧ ಪ್ರಕರಣ ದಾಖಲು

Update: 2025-08-21 19:57 IST

ಸುಳ್ಯ: ಖಾಸಗಿ ಬಸ್ ನಿರ್ವಾಹಕನ ಮೇಲೆ ಮೂರು ಮಂದಿ ಸೇರಿ ಹಲ್ಲೆ ನಡೆಸಿದ ಘಟನೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಸುಳ್ಯದಿಂದ ಕೇರಳದ ಬಂದಡ್ಕಕ್ಕೆ ಹೋಗುವ ಗುರೂಜಿ ಟ್ರಾವೆಲ್ಸ್‌ನ ಬಸ್ ಕಂಡಕ್ಟರ್ ನಂದಕಿಶೋರ್ ಹಲ್ಲೆಗೊಳಗಾದ ಯುವಕ. ಗುರೂಜಿ ಬಸ್ಸಿನಲ್ಲಿ ಹಿಂದೆ ಚಾಲಕನಾಗಿದ್ದ ನಾಗರಾಜ ತನ್ನ ಗೆಳೆಯರಾದ ಮಧು ಪ್ರಸಾದ್ ಮತ್ತು ಶ್ರೀಜಿತ್ ಎಂಬವರ ಜತೆ ಬಂದು ಕಂಡಕ್ಟರ್ ನಂದಕಿಶೋರನನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆ ನಡೆಸಿದ್ದರು ಎಂದು ದೂರಲಾಗಿದೆ.

ನಾಗರಾಜ ಅವರು ಗುರೂಜಿ ಬಸ್ಸಿನಲ್ಲಿ ಸುಮಾರು 3 ವರ್ಷಗಳಿಂದ ಚಾಲಕರಾಗಿದ್ದು ಕಳೆದ 1 ವರ್ಷಗಳ ಹಿಂದೆ ಕಾರಣಾಂತರಗಳಿಂದ ಚಾಲಕ ವೃತ್ತಿ ಬಿಟ್ಟು ಬಂದಡ್ಕದಲ್ಲಿ ವಾಸವಾಗಿದ್ದಾರೆ. ಆ. 18 ರಂದು ನಾಗರಾಜ ಅವರ ಪತ್ನಿ ಬಸ್ಸಿನಲ್ಲಿ ಸುಳ್ಯಕ್ಕೆ ಬರುವಾಗ ಕಂಡಕ್ಟರ್ ನಂದ ಕಿಶೋರ್ ಅವರು ಹಣ ಕೇಳಿ ಪಡೆದು ಟಿಕೆಟ್ ನೀಡಿದ್ದಾರೆ ಎಂಬ ಕಾರಣದ ನೆಪ ಹೇಳಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಸಿದ್ದಾರೆ.

ನಾಗರಾಜ್ ಅವರು ಚಾಲಕರಾಗಿದ್ದ ಸಮಯದಲ್ಲಿ ಅವರ ಮನೆಯವರು ಬಸ್ಸಿನಲ್ಲಿ ಬರುವಾಗ ಟಿಕೆಟ್ ನೀಡುತ್ತಿರ ಲಿಲ್ಲ. ಈಗ ಕೆಲಸದಿಂದ ಬಿಟ್ಟದ್ದರಿಂದ ಟಿಕೆಟ್ ನೀಡಿರುವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಬಸ್ಸಿನ ಮಾಲಕರಾದ ಮೋಹನ್ ಮತ್ತು ಚಂದ್ರಶೇಖರ ಅವರು ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡು ನಾಗರಾಜ್, ಮಧುಪ್ರಸಾದ್, ಶ್ರೀಜಿತ್ ಎಂಬವರ ಮೇಲೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News