×
Ad

ಅಜ್ಜಾವರದಲ್ಲಿ ಸಹೋದರರ ನಡುವೆ ಆಸ್ತಿ ವಿವಾದ: ಅಣ್ಣನಿಂದ ತಮ್ಮನಿಗೆ ಹಲ್ಲೆ

Update: 2023-10-01 22:10 IST

ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ಕುಂಚಡ್ಕ ಎಂಬಲ್ಲಿ ಆಸ್ತಿ ವಿಚಾರದಲ್ಲಿ ಸಹೋದರರ ಮಧ್ಯೆ ಚಕಮಕಿ ನಡೆದು ಅಣ್ಣ ತಮ್ಮನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ.

ಸಹೋದರನ ಕತ್ತಿಯೇಟಿನಿಂದ ಗಾಯಗೊಂಡಿರುವ ರವಿಚಂದ್ರ ಎಂಬವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ರವಿವಾರ ಆಸ್ತಿ ವಿಚಾರವಾಗಿ ಸಹೋದರರೊಳಗೆ ಮಾತು ಬೆಳೆಯಿತು. ಈ ವೇಳೆ ಅಣ್ಣ ಲವ ಕುಮಾರ್ ಎಂಬವರು ತಮ್ಮ ರವಿಚಂದ್ರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದರು.

ಸುಳ್ಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News