×
Ad

ಪಂಪ್‌ವೆಲ್‌: ತಖ್ವಾ ಪಬ್ಲಿಕ್ ಸ್ಕೂಲ್, ಹಿಫ್ಳುಲ್ ಕುರ್‌ಆನ್ ಅಕಾಡೆಮಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ

Update: 2025-08-19 13:14 IST

ಮಂಗಳೂರು: ಪಂಪ್‌ವೆಲ್‌ ನ ತಖ್ವಾ ಪಬ್ಲಿಕ್ ಸ್ಕೂಲ್ ಹಾಗೂ ಹಿಫ್ಳುಲ್ ಕುರ್‌ಆನ್ ಅಕಾಡೆಮಿಯಲ್ಲಿ ಆ.15 ರಂದು 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು.

ಹಾಜಿ ಎಸ್. ಎಂ ರಶೀದ್, ಖತೀಬ್ ಆಫಿಸ್ ಮೊಹಮ್ಮದ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ದೇಶಭಕ್ತಿಯ ಹಾಡುಗಳು ಮತ್ತು ಭಾಷಣ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಸ್ಜಿದುತ್ತಖ್ವಾ ವ್ಯವಸ್ಥಾಪಕ ಜಿಎಂ ಹಸನ್ ಕುಂಞಿ, ಮುಅಝ್ಝಿನ್ ಅಬ್ದುಲ್ ರಹಮಾನ್, ಅಡ್ಮಿನಿಸ್ಟ್ರೇಟರ್ ಅಸ್ಮಾ ಮುಹಮ್ಮದ್ ಅಸಫ್ , ಕೋ ಒರ್ಡಿನೇಟರ್ ಫರೀದಾ ತೌಫೀಖ್ ,ಆಫಿಸ್ ಸಲ್ಮಾನ್ ಉಸ್ತಾದ್ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಕೊನೆಯಲ್ಲಿ ಸಿಹಿತಿಂಡಿ ವಿತರಿಸುವ ಮೂಲಕ ಮುಕ್ತಾಯಗೊಂಡಿತು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News