×
Ad

ಪುತ್ತೂರು ನಗರ ಠಾಣೆಯ ಎಎಸ್ಸೈ ಸುಂದರ ಕಾನಾವು ನಿಧನ

Update: 2024-07-22 11:52 IST

ಪುತ್ತೂರು, ಜು.22: ಪುತ್ತೂರು ನಗರ ಠಾಣೆಯ ಎಎಸ್ಸೈ, ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕಾನಾವು ನಿವಾಸಿ ಐ.ಸುಂದರ ಕಾನಾವು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.

ಮೂರು ದಿನಗಳ ಹಿಂದೆ ಮನೆಯಲ್ಲಿ ಬ್ರೈನ್ ಸ್ಟೋಕ್ ಗೆ ಒಳಗಾಗಿದ್ದ ಸುಂದರ ಕಾನಾವು ಅವರನ್ನು ಮಂಗಳೂರು ಪಡೀಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆಯಲ್ಲಿ ಸೇವೆಗೆ ಆತಂಭಿಸಿದ ಸುಂದರ ಕಾನಾವು ಬಳಿಕ ಸುಬ್ರಹ್ಮಣ್ಯ ಠಾಣೆಯಲ್ಲಿ ಸೇವೆ ಸಲ್ಲಿಸಿ ಹೆಡ್ ಕಾನ್ ಸ್ಟೇಬಲ್ ಆಗಿ ಭಡ್ತಿಗೊಂಡು ಅಲ್ಲಿಂದ ಬಂಟ್ವಾಳ ಠಾಣೆಗೆ ವರ್ಗಾವಣೆಗೊಂಡರು. ಬಳಿಕ ಸಂಪ್ಯ ಠಾಣೆಗೆ ವರ್ಗಾವಣೆಗೊಂಡು ಅಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಭಡ್ತಿಗೊಂಡು ಇತ್ತೀಚೆಗೆ ಪುತ್ತೂರು ನಗರ ಠಾಣೆಗೆ ವರ್ಗಾವಣೆಗೊಂಡಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಬಂದು ಬಳಗವನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News