×
Ad

ಪುತ್ತೂರು: ತೋಡಿನಲ್ಲಿ ಮಹಿಳೆಯ ಮೃತದೇಹ ಪತ್ತೆ

Update: 2025-08-07 11:48 IST

ಪುತ್ತೂರು:   ಮಹಿಳೆಯೊಬ್ಬರ ಮೃತದೇಹ ತೋಡಿನಲ್ಲಿ ಪತ್ತೆಯಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕೆದಿಲ ಎಂಬಲ್ಲಿ ನಡೆದಿದೆ.

ಕೆದಿಲ ಗ್ರಾಮದ ಕಾಂತಕೋಡಿ ಎಂಬಲ್ಲಿಯ ಮಮತಾ (35) ಮೃತ ಮಹಿಳೆ.  ಇವರು ಬುಧವಾರ ಮದ್ಯಾಹ್ನದ ವೇಳೆ ಮನೆಯ ಪಕ್ಕದ ತೋಡಿಗೆ ಬಟ್ಟೆ ಒಗೆಯಲು ಹೋಗಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮಧ್ಯೆ ಮೃತಪಟ್ಟಿರುವುದು ಆಕಸ್ಮಿಕವೋ , ಆತ್ಮಹತ್ಯೆಯೋ ಅಥವಾ ಕೊಲೆವೋ ಎಂಬ ಬಗ್ಗೆ ಹಲವಾರು ಸಂಶಯಗಳು ಉಂಟಾಗಿವೆ.

ಮಮತಾ ಅವರ ಪತಿಯ ಅಣ್ಣ ಈ ಘಟನೆಯ ಬಳಿಕ ನಾಪತ್ತೆಯಾಗಿದ್ದು, ಅವರ ಮೊಬೈಲ್‌ ಫೋನ್ ಸ್ವಿಚ್ ಆಫ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಇದೀಗ ಅವರ ಮೇಲೆ ಪೊಲೀಸ್ ತನಿಖೆ ತೀವ್ರಗೊಳ್ಳುತ್ತಿದೆ.

ಸ್ಥಳಕ್ಕೆ ಭೇಟಿ ನೀಡಿದ ಪುತ್ತೂರು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಎಲ್ಲ ಸಾಧ್ಯತೆಯ ಅಂಶಗಳ ಬಗ್ಗೆ ವಿಚಾರಣೆ ಆರಂಭಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಮೃತರು ಇಬ್ಬರು ಸಣ್ಣ ಮಕ್ಕಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News