ರಾಕೇಶ್ ಅಡ್ಕರಿಗೆ ಕಂಬಳ ಗುತ್ತು ಪ್ರಶಸ್ತಿ ಪ್ರದಾನ
ಮಂಗಳೂರು, ಜ.18: ಕಲಾವಿದನ ವಿನಯ ಶೀಲತೆ ಆತನ ಮೌಲ್ಯವನ್ನು ಹೆಚ್ಚಿಸುತ್ತದೆ. ಸಾಧನೆಯ ಪಥ ಸುಲಭ ವಾಗುತ್ತದೆ ಎಂದು ವೈದ್ಯ ಡಾ. ಜಯಶಂಕರ್ ಮಾರ್ಲ ನುಡಿದರು.
ತೆಂಕುತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆಯ ಯುವ ವೇಷಧಾರಿ, ಯಕ್ಷಗುರು, ಸಂಘಟಕ, ನಿರ್ದೇಶಕ ರಾಕೇಶ್ ರೈ ಅಡ್ಕ ಅವರಿಗೆ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮತಿ ಪ್ರಶಸ್ತಿಯನ್ನು ಉಷಾ ನವನೀತ ಶೆಟ್ಟಿಯ ಪಾವಂಜೆ ಮೇಳದ ಸೇವೆ ಆಟದ ವೇದಿಕೆಯಲ್ಲಿ ಪ್ರದಾನ ಮಾಡಿ ಅವರು ಮಾತನಾಡಿದರು.
ಡಾ. ಸುಧಾಕರ ಮಾರ್ಲ ಅಭಿನಂದಿಸಿ ಮಾತನಾಡಿದರು.
ಮಾಜಿ ರೋಟರಿ ಗವರ್ನರ್ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಭಾಗವತರು, ಕಿಶೋರ್ ಡಿ. ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಪ್ರದೀಪ ಆಳ್ವ ಕದ್ರಿ, ಮುಲ್ಕಿ ಕರುಣಾಕರ ಶೆಟ್ಟಿ, ಹರೀಶ್ ಕುಮಾರ್ ಕುಳಾಯಿ, ಸಂಜಯ ಕುಮಾರ್ ರಾವ್, ಕದ್ರಿ ಭಾಸ್ಕರ ಶೆಟ್ಟಿ, ಸಾಕೇತ್ ಶೆಟ್ಟಿ ಉಪಸ್ಥಿತರಿದ್ದರು.
ಕದ್ರಿ ಕಂಬಳ ಗುತ್ತು ನವನೀತ ಶೆಟ್ಟಿ ಸ್ವಾಗತಿಸಿದರು. ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.