ಸುಳ್ಯ: ಕಮಲುದ್ದೀನ್ ಕುದ್ರೋಳಿ ನಿಧನ
Update: 2026-01-18 12:22 IST
ಸುಳ್ಯ: ಸುಳ್ಯ ಗಾಂಧಿನಗರ ನಾವೂರು ನಿವಾಸಿ, ಕಮಲುದ್ದೀನ್ ಕುದ್ರೋಳಿ ಜನತಾ (52) ಅಲ್ಪಕಾಲದ ಅಸೌಖ್ಯದಿಂದ ಜ.18ರಂದು ಮುಂಜಾನೆ 4 ಗಂಟೆ ಸುಮಾರಿಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಮಂಗಳೂರು ಕುದ್ರೋಳಿಯವರಾಗಿದ್ದ ಇವರು ಕಳೆದ 30 ವರ್ಷಗಳಿಂದ ಸುಳ್ಯದಲ್ಲಿ ನೆಲೆಸಿದ್ದರು. ಸುಳ್ಯ ಜನತಾ ಸ್ಟೋರ್ ನ ರಿಝ್ವಾನ್ ಅವರ ಮಾವ (ತಾಯಿಯ ಸಹೋದರ) ನಾಗಿರುವ ಕಮಲುದ್ದೀನ್, ಜನತಾ ಸ್ಟೋರ್ ನ ವ್ಯವಹಾರ ನೋಡಿಕೊಳ್ಳುತ್ತಿದ್ದರು.
ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಇಂದು(ಜ.18) ಸಂಜೆ 4 ಗಂಟೆಗೆ ಮಂಗಳೂರು ಕುದ್ರೋಳಿಯ ಮಸೀದಿ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.