×
Ad

ಜೋಕಟ್ಟೆ| ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತ ಸಮ್ಮೇಳನ

Update: 2026-01-18 20:44 IST

ಮಂಗಳೂರು: ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದ್ರಸ ಮ್ಯಾನೇಜ್‌ ಮೆಂಟ್‌ನ ಜಂಟಿ ಆಶ್ರಯದಲ್ಲಿ ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ಸಮಸ್ತ ಸಮ್ಮೇಳನವು ಜೋಕಟ್ಟೆ ಹೊಸ ಮಸೀದಿ ವಠಾರದಲ್ಲಿ ರವಿವಾರ ಮಗ್ರಿಬ್ ನಮಾಝಿನ ಬಳಿಕ ನಡೆಯಿತು.

ಸಮಾರಂಭವನ್ನು ದ.ಕ.‌ಜಿಲ್ಲೆಯ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಉದ್ಘಾಟಿಸಿದರು. ಜೋಕಟ್ಟೆ ಹಳೆ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಯಿ ದುಆ ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವೈಟ್ ಸ್ಪೋನ್ ಮಾಲಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಎಂ.ಶರೀಫ್ ಹಾಜಿ ವಹಿಸಿದ್ದರು. ಕೇರಳ ಕಣ್ಣೂರಿನ ಅಬ್ದುಲ್ ಗಫೂರ್ ಮೌಲವಿ ಮುಖ್ಯ ಭಾಷಣಗೈದರು.

ಸ್ವಾಗತ ಸಮಿತಿಯ ಕನ್ವೀನರ್ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಶಿದಿ ಸ್ವಾಗತ ಭಾಷಣಗೈದರು. ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಫಝಲ್ ರಹ್ಮಾನ್ ನಿಝಾಮಿ ಅಲ್ ಫಾರೂಕಿ ಪ್ರಾಸ್ತಾವಿಕ ಭಾಷಣ ಮಾಡಿದರು.

ಇದೇ ವೇಳೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ, ಅಲ್ ಮುಝೈನ್ ಮಾಲಕ ಹಾಜಿ ಬಿ.ಎಂ. ಝಕರಿಯಾ ಜೋಕಟ್ಟೆ ಹಾಗೂ ವೈಟ್ ಸ್ಪೋನ್ ಮಾಲಕ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಿ.ಎಂ.ಶರೀಫ್ ಹಾಜಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಜೋಕಟ್ಟೆ ಹೊಸ ಜುಮಾ ಮಸೀದಿಯ ಮುದರ್ರಿಸ್ ಇ.ಎಂ ಅಬ್ದುರ್ರಹ್ಮಾನ್ ದಾರಿಮಿ, ಜೋಕಟ್ಟೆ ಈದ್ಗಾ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶರೀಫ್ ಹನೀಫಿ, ದ.ಕ. ಜಿಲ್ಲಾ ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಸುದ್ದಿನ್ ದಾರಿಮಿ, ಎಸ್ಕೆಐಎಂವಿಬಿ ಮುಫತ್ತಶ್ ಹನೀಫ್ ಮುಸ್ಲಿಯಾರ್, ಎಸ್ಕೆಐಎಂವಿಬಿ ಮುದರ್ರಿಸ್ ತಾಜುದ್ದೀನ್ ರಹ್ಮಾನಿ, ಬೆಂಗರೆ ಹೆಡ್ ಜುಮಾ ಮಸೀದಿಯ ಖತೀಬ್ ಎಂ.ಐ. ಮುಹಮ್ಮದ್ ಅಶ್ರಫ್ ಫೈಝಿ, ತೋಟ ಬೆಂಗರೆ ಜುಮಾ ಮಸೀದಿಯ ಖತೀಬ್ ಅನೀಸ್ ಫೈಝಿ, ತಣ್ಣೀರು ಬಾವಿ ಜುಮಾ‌ ಮಸೀದಿಯ ಖತೀಬ್ ಅಬ್ದುಲ್ ಸತ್ತಾರ್ ಫೈಝಿ, ಬೆಂಗರೆ ಬದ್ರಿಯಾ ಜುಮಾ‌ ಮಸೀದಿಯ ಖತೀಬ್ ಅನ್ಸಾರ್ ಇರ್ಫಾನಿ, ಬೆಂಗರೆ ಖಿಲ್‌ರಿಯಾ ಜುಮಾ ಮಸೀದಿಯ ಖತೀಬ್ ನಾಸಿ‌ರ್ ಕೌಸರಿ ಮೊದಲಾದವರು ಅನುಗ್ರಗ ಭಾಷಣಗೈದರು.


ಸಮಾರಂಭದಲ್ಲಿ ಜೋಕಟ್ಟೆ ಹಳೆ ಜುಮಾ ಮದೀದಿಯ ಅಧ್ಯಕ್ಷ ಅಬ್ದುಲ್ ರಶೀದ್ ಕೊಪ್ಪ, ಕೋಶಾಧಿಕಾರಿ ಒ.ಎಂ. ಅಬ್ದುಲ್ ಕಾದರ್, ಹೊಸ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಕೆ.ಕೆ. ಅಬ್ದುಲ್ ಕಾದರ್ ಎಚ್ಪಿಸಿಎಲ್ ಕಾಲನಿ, ಜೋಕಟ್ಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಉಮರುಲ್ ಫಾರೂಕ್, ಮಂಗಳೂರು ಮನಪಾ ನಿಕಟಪೂರ್ವ ಸದಸ್ಯ ಮುನೀಬ್ ಬೆಂಗರೆ, ದ.ಕ. ಜಿಲ್ಲಾ ಸಮಸ್ತ ಮದರಸ ಮೇನೇಜ್ ಮೆಂಟ್ ಅಧ್ಯಕ್ಷ ಹಾಜಿ ಎಂ.ಎಚ್. ಮೊದಿನಬ್ಬ, ಮಂಗಳೂರು ವೆಸ್ಟ್ ರೇಂಜ್ ಸಮಸ್ತ ಮದರಸ ಮೆನೆಜೈಂಟ್ ಅಧ್ಯಕ್ಷ ಬಿಲಾಲ್ ಮೊಯ್ದಿನ್ ಬೆಂಗರೆ, ಜೋಕಟ್ಟೆ ಅಂಜುಮನ್ ಕುವ್ವತುಲ್ ಇಸ್ಲಾಂ ಸಮಿತಿ ಅಧ್ಯಕ್ಷ ಹಾಜಿ ಸುಲೈಮಾನ್ ಬೊಟ್ಟು, ತಣ್ಣೀರು ಬಾವಿ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಾಝಿಕ್, ತೋಟ ಬೆಂಗರೆ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರವೂಫ್, ಕಳವಾರು ಜುಮಾ ಮಸೀದಿಯ ಅಧ್ಯಕ್ಷ ಬಿ. ಆದಂ, ಉದ್ಯಮಿ ಹಾಜಿ ಮುಹಮ್ಮದ್ ಜತ್ತಬೆಟ್ಟು ಕೃಷ್ಣಾಪುರ, ಮಾಶಿತಾ ಹುಸೈನ್ ಹಾಜಿ, ಆಲಿ ಹಾಜಿ, ಮಜೀದ್ ಹಾಜಿ, ಫಕೀರಬ್ಬ ಮಾಸ್ಟರ್. ಜಿ. ಶಂಸುದ್ದೀನ್ ಹಾಜಿ ಬಿ.ಎಸ್‌. ಹುಸೈನಬ್ಬ, ಟಿ.‌ ಮುಹಮ್ಮದ್‌ ಮುಸ್ಲಿಯಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಕನ್ವೀನರ್ ಪಿ.ಎಂ. ಅಬ್ದುಲ್ಲಾಹಿ ನಈಮಿ ಅಲ್ ಮುರ್ಶಿದಿ ಸ್ವಾಗತ ಭಾಷಣಗೈದರು. ಜೋಕಟ್ಟೆ ನೂರಾನಿಯಾ ಜುಮಾ‌ ಮಸೀದಿಯ ಸದರ್ ಮುಅಲ್ಲಿಂ ಶರೀಫ್ ದಾರಿಮಿ ಖಿರಾಅತ್ ಪಠಿಸಿದರು.

ಮಂಗಳೂರು ವೆಸ್ಟ್ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸಮಸ್ತ ಮದ್ರಸ ಮ್ಯಾನೇಜ್‌ಮೆಂಟ್‌ನ ಜಂಟಿ ಆಶ್ರಯದಲ್ಲಿ, ಸಮಸ್ತ ನೂರನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಸ್ತ ಸಮ್ಮೇಳನದ ಪ್ರಯುಕ್ತ ಬೆಳಗ್ಗೆ 7ಕ್ಕೆ ವಲಿಯುಲ್ಲಾಹಿ ಶೇಖ್ ಹಾಜಿ ಮಖಾಂ ಝಿಯಾರತ್,7:30ಕ್ಕೆ ವಲಿಯುಲ್ಲಾಹಿ ಸೀವಾ ಇಮಾಮ್ ಮಖಾಂ ಝಿಯಾರತ್ ನಡೆದು ಬೆಳಗ್ಗೆ 8:30ಕ್ಕೆ ಹೊಸ ಮಸೀದಿ ವಠಾರದಲ್ಲಿ ಧ್ವಜಾರೋಹಣ ನಡೆಯಿತು.

ಅಸರ್ ನಮಾಝ್ ಬಳಿಕ ಜೋಕಟ್ಟೆ ಹಳೇಯ ಮಸೀದಿಯಿಂದ ಈದ್ದಾ ಮಸೀದಿ ವರೆಗೆ ದಫ್, ಸೈಟ್, ಪ್ಲವರ್ ಶೋಗಳೊಂದಿಗೆ ಬೃಹತ್ ಸಮಸ್ತ ಸಂದೇಶ ಜಾಥಾ ನಡೆಯಿತು.





Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News