×
Ad

ಮುಹಮ್ಮದ್ ಅಹ್ನಾಫ್ ಹುಸೈನ್ ರ ಕಥಾ ಸಂಕಲನ ಬಿಡುಗಡೆ

Update: 2024-11-15 16:06 IST

ಮಂಗಳೂರು: ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದ 43ನೇ ಆವೃತ್ತಿಯಲ್ಲಿ ದ.ಕ ಜಿಲ್ಲೆಯ ಅಡ್ಡೂರಿನ ಪ್ರಸಕ್ತ ದುಬೈಯಲ್ಲಿ ಉದ್ಯಮಿಯಾಗಿರುವ ಅನ್ವರ್ ಹುಸೈನ್ ಮತ್ತು ಶಹನಾಝ್ ದಂಪತಿಯ ಪುತ್ರ ಮುಹಮ್ಮದ್ ಅಹ್ನಾಫ್ ಹುಸೈನ್ ಆಂಗ್ಗ ಭಾಷೆಯಲ್ಲಿ ರಚಿಸಿದ ಕೃತಿ ಕಥಾ ಸಂಕಲನ 'ದಿ ಹೀರೋಯಿಕ್ ಟೇಲ್ಸ್ ಆಫ್ ಅನ್ನಾ ಆ್ಯಂಡ್ ಸಾರಾ' ಬಿಡುಗಡೆಗೊಂಡಿತು.

ದುಬೈಯ ಜೆಮ್ಸ್ ಮಿಲೆನಿಯಮ್ ಶಾಲೆಯ ಐದನೇ ತರಗತಿ ವಿದ್ಯಾರ್ಥಿಯಾಗಿರುವ ಅಹ್ನಾಫ್ ಹುಸೈನ್ ರ ಕಥಾ ಸಂಕಲನವನ್ನು ಶಾರ್ಜಾದ ಉದ್ಯಮಿ ಪ್ರಮೋದ್ ಬಿಡುಗಡೆಗೊಳಿಸಿದರು.

ಕೃತಿಯನ್ನು ಸ್ವೀಕರಿಸಿದ ನೂರ್ ಅಶ್ಫಾಕ್ ಮಾತನಾಡಿ, ಇಂದಿನ ಯುವ ಪೀಳಿಗೆ ಸೋಶಿಯಲ್ ಮೀಡಿಯಾದಲ್ಲಿ ಮುಳುಗಿರುವಾಗ ಸಣ್ಣ ಪ್ರಾಯದ ಅಹ್ನಾಫ್ ಅವರ ಪ್ರಯತ್ನ ಶ್ಲಾಘನೀಯ ಎಂದರು.

ಕೃತಿಕಾರ ಅಹ್ನಾಫ್ ಮಾತನಾಡಿ, ಪುಸ್ತಕಗಳನ್ನು ಓದುವ ಹವ್ಯಾಸ ಇದ್ದುದರಿಂದ ಕೆಲವೊಂದು ಪುಸ್ತಕಗಳಿಂದ ಪ್ರೇರಣೆ ಪಡೆದು ಈ ಕೃತಿಯನ್ನು ರಚಿಸಲು ಸಾಧ್ಯವಾಯಿತು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News