×
Ad

ಖ್ಯಾತ ಕೊಂಕಣಿ ಸಂಗೀತಗಾರ ಕ್ಲೌಡ್ ಡಿಸೋಜ ನಿಧನ

Update: 2023-07-24 22:20 IST

ಮಂಗಳೂರು, ಜು. 24: ಖ್ಯಾತ ಕೊಂಕಣಿ ಸಂಗೀತಗಾರ, ಮಲ್ಲಿಕಟ್ಟೆ ನಿವಾಸಿ ಕ್ಲೌಡ್ ಡಿಸೋಜ (67) ಅವರು ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಬೆಳಗ್ಗೆ ನಿಧನರಾದರು.

ಅವರು ಪತ್ನಿ, ಇಬ್ಬರು ಮಕ್ಕಳನ್ನು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕ್ಲೌಡ್ ಡಿಸೋಜ ಅವರು ಕೊಂಕಣಿ ಮೇರು ಸಂಗೀತಗಾರ ವಿಲ್ಫಿ ರೆಬಿಂಬಸ್ ಅವರ ತಂಡದ ಸದಸ್ಯರಾಗಿ 175 ನೈಟ್ಸ್‌ಗಳಲ್ಲಿ ಪ್ರದರ್ಶನ ನೀಡಿದ್ದರು. ಅವರು ಡ್ರಮ್ಸ್ ಮತ್ತು ಗಿಟಾರ್ ನುಡಿಸುವಲ್ಲಿ ಅಸಾಧಾರಣ ಪ್ರತಿಭಾವಂತರಾಗಿದ್ದರು. 61 ಮ್ಯೂಸಿಕಲ್ ನೈಟ್ಸ್‌ಗಳನ್ನು ಪ್ರಸ್ತುತಪಡಿಸಿದ್ದಾರೆ. 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಬರೆದಿದ್ದಾರೆ. ನಿರ್ದೇಶಕರಾಗಿ ಮತ್ತು ನಾಟಕಕಾರರಾಗಿ ಕೊಡುಗೆ ನೀಡಿದ್ದಾರೆ.

ಅಗಾಧ ಪ್ರತಿಭೆ ಮತ್ತು ಕೊಡುಗೆಗಾಗಿ ಸಂದೇಶ ಪ್ರಶಸ್ತಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಅವರು ಭಾಜನರಾಗಿದ್ದರು. ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಬೆಂದೂರ್‌ನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನಲ್ಲಿ ನಡೆಯಲಿದೆ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News