×
Ad

ಕುದುರೆಮುಖ ವನ್ಯ ಜೀವಿ ವಿಭಾಗ ವ್ಯಾಪ್ತಿಯ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ

Update: 2023-07-25 22:52 IST

ಕಾರ್ಕಳ: ಮುಂಗಾರು ಮಳೆ ತೀವ್ರಗೊಂಡಿದ್ದು ಕೊಲ್ಲೂರು, ಸಿದ್ಧಾಪುರ, ಅಮಾವಾಸ್ಯೆ ಬೈಲು ಹೆಬ್ರಿ, ಕಾರ್ಕಳ ಬೆಳ್ತಂಗಡಿ, ಕುದುರೆಮುಖ ಕೆರೆಕಟ್ಟೆ ವ್ಯಾಪ್ತಿಗಳ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರನ್ನು ನಿರ್ಬಂಧಿಸಿ ಕಾರ್ಕಳ ಕುದುರೆ ಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅದೇಶ ಹೊರಡಿಸಿದ್ದಾರೆ.

ಮುಂದಿನ ಅದೇಶದವರೆಗೆ ಸಾರ್ವಜನಿಕರಿಗೆ ಜಲಪಾತ ವೀಕ್ಷಿಸಲು ಅನುಮತಿವಿರುವುದಿಲ್ಲ. ಜಲಪಾತಗಳ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿ ಆ ಪ್ರದೇಶದಲ್ಲಿ ಅಗತ್ಯ ಕಾವಲುಗಾರರನ್ನು ನೇಮಿಸಿ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News