×
Ad

ಸಾಲೆತ್ತೂರು | ಪವಿತ್ರ ಯಾತ್ರೆಗೆ ಕೂಡಿಟ್ಟ ಹಣವನ್ನು ಫಂಡ್‌ಗೆ ನೀಡಿದ ವಿದ್ಯಾರ್ಥಿ

Update: 2025-11-29 17:53 IST

ಸಾಲೆತ್ತೂರು, ನ.29: ಮಕ್ಕ, ಮದೀನಾ ಯಾತ್ರೆ ಬಹುತೇಕರ ಕನಸು. ಅದನ್ನು ನನಸು ಮಾಡುವ ಸಲುವಾಗಿ ತನ್ನ ಹತ್ತನೇ ಪ್ರಾಯದಲ್ಲೇ ಹಣ ಕೂಡಿಟ್ಟ ವಿದ್ಯಾರ್ಥಿ ಇದೀಗ ಆ ಹಣವನ್ನು ತಹಿಯ್ಯಾ ಫಂಡ್‌ಗೆ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಸಾಲೆತ್ತೂರು ಹಯಾತುಲ್ ಇಸ್ಲಾಂ ಮದ್ರಸದ 5ನೇ ತರಗತಿಯಲ್ಲಿ ಕಲಿಯುತ್ತಿರುವ ಮುಝಮ್ಮಿಲ್ ಮಕ್ಕಾ, ಮದೀನಾದ ಯಾತ್ರೆಗಾಗಿ ಕಳೆದ ಎರಡು ವರ್ಷಗಳಿಂದ 2,989 ರೂ. ಹಣ ಕೂಡಿಟ್ಟಿದ್ದರು.

ಈ ಮಧ್ಯೆ ಸಮಸ್ತದ ತಹಿಯ್ಯಾ ಫಂಡ್‌ಗೆ ಉಸ್ತಾದರು ಹಣ ಸಂಗ್ರಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಝಮ್ಮಿಲ್ ತಾನು ಕೂಡಿಟ್ಟ ಹಣವನ್ನು ಫಂಡ್‌ಗೆ ನೀಡಲು ಮುಂದಾದರು. ಈ ವೇಳೆ ಉಸ್ತಾದರು ಸ್ವಲ್ಪ ಹಣ ತೆಗೆದು ಉಳಿದಿದುದನ್ನು ತಾನೇ ಇಟ್ಟುಕೊಳ್ಳುವಂತೆ ಸೂಚಿಸಿದರೂ ಮುಝಮ್ಮಿಲ್ ಕೇಳಲಿಲ್ಲ. ಎಲ್ಲವೂ ಸಮಸ್ತದ ಮಹತ್ತರ ಯೋಜನೆಗೆ ಇರಲಿ. ನನಗೆ ನೀವೆಲ್ಲಾ ಪ್ರಾರ್ಥಿಸಿರಿ ಎಂದು ಮುಝಮ್ಮಿಲ್ ಹೇಳಿ ಎಲ್ಲಾ ಮೊತ್ತವನ್ನು ತಹಿಯ್ಯಾ ಫಂಡ್‌ಗೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News