×
Ad

ಸಾಲ್ಮರ: ಫಾಳಿಲ-ಫಳೀಲಾ ಕರ್ನಾಟಕ ರಾಜ್ಯ ಹಿಯಾ ಫಿಯೆಸ್ಟ ಕಾರ್ಯಕ್ರಮ

Update: 2023-11-12 19:16 IST

ಪುತ್ತೂರು  : ಧರ್ಮದ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಗಳ ಬಗೆಗಿನ ಅರಿವು ಮಕ್ಕಳಲ್ಲಿ ಮೂಡಿದಾಗ ಮಾತ್ರ ಆ ಮಕ್ಕಳು ಮುಂದೆ ಸುಂಸಸ್ಕೃತರಾಗಿ ರೂಪುಗೊಳ್ಳುತ್ತಾರೆ. ಪ್ರಸಕ್ತ ಕಾಲಘಟ್ಟದಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಲೌಕಿಕ ಶಿಕ್ಷಣವನ್ನೂ ಪಡೆಯುವುದು ಅತ್ಯಗತ್ಯವಾಗಿದೆ, ಸಮನ್ವಯ ಶಿಕ್ಷಣವು ವಿದ್ಯಾರ್ಥಿಗೆ ಸಿಕ್ಕಿದಾಗ ಬದುಕಿನ ಧ್ಯೇಯ ಅರಿತು ಒಳಿತಿನ ಹಾದಿಯಲ್ಲಿ ಬದುಕು ಬೆಳಗಿಸಲು ಸಾಧ್ಯವಾಗಲಿದೆ ಎಂದು ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್‌ನ ವ್ಯವಸ್ಥಾಪಕ ಮೋಯಿನ್ ಕುಟ್ಟಿ ಮಾಸ್ಟರ್ ಅಭಿಪ್ರಾಯಪಟ್ಟರು.

ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಫಾಳಿಲಾ -ಫಳೀಲಾ ಕರ್ನಾಟಕ ರಾಜ್ಯ ಹಿಯಾ ಫಿಯೆಸ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಪಿ.ಅಹ್ಮದ್ ಹಾಜಿ ಅಕರ್ಷಣ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸಮಸ್ತ’ ಕೇಂದ್ರ ಮುಶಾವರ ಸದಸ್ಯ ಖಾಝಿ ಶೈಖುನಾ ಅಲ್‌ಹಾಜಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಮಾತನಾಡಿ ಮಾದಕ ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಪ್ರತಿಯೊಂದು ಮೊಹಲ್ಲಾಗಳಲ್ಲೂ ಜಾಗೃತಿ ಮೂಡಿಸಬೇಕಿದೆ. ಅದಕ್ಕಾಗಿ ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನೂ ನೀಡಬೇಕು. ಈ ನಿಟ್ಟಿನಲ್ಲಿ ‘ಸಮಸ್ತ’ದ ಅಧೀನದಲ್ಲಿ ಗಂಡು ಮತ್ತು ಹೆಣ್ಮಕ್ಕಳಿಗೆ ಸಮನ್ವಯ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ ಎಂದರು.

ಫಾಳಿಲಾ ಕೇಂದ್ರೀಯ ಕೋರ್ಡಿನೇಟರ್‌ಗಳಾದ ಸಈದ್ ಫೈಝಿ, ಮುಬಶ್ಶಿರ್ ಫೈಝಿ ಮಲಪ್ಪುರಂ, ಕರ್ನಾಟಕ ಫಾಳಿಲಾ ಹಿಯಾ ಪಿಯಸ್ಟ ಸ್ವಾಗತ ಸಮಿತಿ ಅಧ್ಯಕ್ಷ ಯು. ಮುಹಮ್ಮದ್ ಹಾಜಿ ಪಡೀಲ್, ಕೌನ್ಸಿಲರ್ ರಿಯಾಝ್ ಇಂಜಿನಿಯರ್ ವಳತ್ತಡ್ಕ ಮಾತನಾಡಿದರು.

ಉದ್ಯಮಿಗಳಾದ ಉಮರ್ ಹಾಜಿ ಕೋಡಿಂಬಾಡಿ, ಬಶೀರ್ ಹಾಜಿ ದಾರಂದಕುಕ್ಕು, ‘ಸಮಸ್ತ’ ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುರ‌್ರಶೀದ್ ಹಾಜಿ ಪರ್ಲಡ್ಕ, ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್‌ನ ಸಂಚಾಲಕ ಹಾಜಿ ಅಬ್ದುರ‌್ರಹ್ಮಾನ್ ಆಝಾದ್, ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಯು.ಅಬ್ದುಲ್ಲಾ ಹಾಜಿ, ಎಲ್.ಟಿ. ಅಬ್ದುರ‌್ರಝಾಕ್ ಹಾಜಿ, ಇಸ್ಹಾಕ್ ಫೈಝಿ ದೇರಳಕಟ್ಟೆ, ಫಾಳಿಲಾ ಕರ್ನಾಟಕ ಕೋರ್ಡಿನೇಟರ್ ಮುಸ್ತಫಾ ಅನ್ಸಾರಿ ಅಡ್ಯಾರ್ ಕಣ್ಣೂರು, ಅಬ್ದುರ‌್ರಹ್ಮಾನ್ ಫೈಝಿ ಕೆಮ್ಮಾರ, ಆದಂ ಕೂರ್ನಡ್ಕ, ಆಸಿಫ್ ತೋಡಾರ್, ಶಾಲಾ ದೈಹಿಕ ಶಿಕ್ಷಕ ಅಶ್ರಫ್ ಮತ್ತು ಹಮೀದ್ ಪಾಲ್ಗೊಂಡಿದ್ದರು.

ಕರ್ನಾಟಕ ಫಾಳಿಲಾ ಕೋರ್ಡಿನೇಟರ್ ಕೆ.ಎಂ.ಎ. ಕೊಡುಂಗಾಯಿ ಫಾಝಿಲ್ ಹನೀಫಿ ಸ್ವಾಗತಿಸಿದರು. ಮುಫತ್ತಿಷ್ ಉಮರ್ ದಾರಿಮಿ ಸಾಲ್ಮರ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News