MEIF ವತಿಯಿಂದ ಮೆಡಿಕಲ್ ಮತ್ತು ಇಂಜಿನಿಯರ್ ಸೀಟುಗಳಿಗೆ ಸ್ಕಾಲರ್ಷಿಪ್
Update: 2025-08-04 20:07 IST
ಮಂಗಳೂರು: ಈ ವರ್ಷ ನಡೆದಿರುವ NEET ಮತ್ತು CET ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಸರಕಾರಿ ಕೋಟಾದಲ್ಲಿ ಸೀಟು ಪಡೆದ ಅನಾಥ ಹಾಗೂ ಆರ್ಥಿಕವಾಗಿ ತೀರಾ ಹಿಂದುಳಿದ ಮುಸ್ಲಿಂ ವಿದ್ಯಾರ್ಥಿಗಳಿಗೆ MEIF ವತಿಯಿಂದ ಈ ಕೆಳಗಿನ ಸ್ಕಾಲರ್ಷಿಪ್ ನೀಡಲಿದೆ.
1) NEET ಮೂಲಕ ಮೆಡಿಕಲ್ ಸೀಟು ಪಡೆದ 2 ವಿದ್ಯಾರ್ಥಿಗಳು
2) CET ಮೂಲಕ ಇಂಜಿನಿಯರಿಂಗ್ ಸೀಟು ಪಡೆದ 20 ವಿದ್ಯಾರ್ಥಿಗಳಿಗೆ ಗರಿಷ್ಠ ತಲಾ 25000 ರೂ.
ಆಸಕ್ತ ವಿದ್ಯಾರ್ಥಿಗಳು ನಿಗದಿತ ನಮೂನೆಯಲ್ಲಿ ದಿನಾಂಕ 11/8/2025ರ ಒಳಗಾಗಿ MEIF ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ನಮೂನೆ MEIF ಕಚೇರಿಯಲ್ಲಿ ಲಭ್ಯವಿರುವುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8792115666 ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಪಿ ಬ್ಯಾರಿ ತಿಳಿಸಿದ್ದಾರೆ.