×
Ad

ಉಕ್ಕು ಸಚಿವಾಲಯದ ಕಾರ್ಯದರ್ಶಿ ಬಂದರಿಗೆ ಭೇಟಿ

Update: 2023-09-08 21:40 IST

ಮಂಗಳೂರು, ಸೆ.8: ಕೇಂದ್ರ ಸರಕಾರದ ಉಕ್ಕು ಸಚಿವಾಲಯದ ಕಾರ್ಯದರ್ಶಿ ನಾಗೇಂದ್ರ ನಾಥ್ ಸಿನ್ಹಾ ಶುಕ್ರವಾರ ನವಮಂಗಳೂರು ಬಂದರು ಪ್ರಾಧಿಕಾರಕ್ಕೆ ಭೇಟಿ ನೀಡಿದರು.

ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ಎ.ರಮಣ ಅವರು ನಾಗೇಂದ್ರ ನಾಥ್ ಸಿನ್ಹಾ ರನ್ನು ಬಂದರಿನಲ್ಲಿ ಸ್ವಾಗತಿಸಿದರು, ಉಪಾಧ್ಯಕ್ಷ ಕೆ.ಜಿ. ನಾಥ್ ಉಪಸ್ಥಿತರಿದ್ದರು.

ಉಕ್ಕಿನ ಸಚಿವಾಲಯದ ಅಧಿಕಾರಿಗಳು ಕ್ರೂಸ್ ಟರ್ಮಿನಲ್‌ಗೆ ಭೇಟಿ ನೀಡಿ ಮೂಲಸೌಕರ್ಯ ಬಗ್ಗೆ ಬಂದರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ನ್ಯೂ ಮಂಗಳೂರು ಬಂದರು ಪ್ರಾಧಿಕಾರದಲ್ಲಿ ಕೆಐಒಸಿಎಲ್‌ನ ಕಬ್ಬಿಣದ ಅದಿರು / ಕಚ್ಚಾ ವಸ್ತುಗಳ ಆಮದು ಮತ್ತು ಕಬ್ಬಿಣದ ಉಂಡೆಗಳ ರಫ್ತು ನಿರ್ವಹಣೆ ಸೌಲಭ್ಯಗಳನ್ನು ಉಕ್ಕು ಸಚಿವಾಲಯದ ಅಧಿಕಾರಿಗಳು ಮಾಹಿತಿ ಪಡೆದರು. ಕೆಐಒಸಿಎಲ್‌ನ ಸಿಎಂಡಿ ಟಿ. ಸಾಯಿನಾಥನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News