×
Ad

ಜಮಾಅತೆ ಇಸ್ಲಾಮಿ ಹಿಂದ್ ನಿಂದ ಸೀರತ್ ಅಭಿಯಾನ: ಸಿಎಂ ಸಿದ್ದರಾಮಯ್ಯರಿಗೆ 'ಮುಹಮ್ಮದ್ (ಸ)' ಕೃತಿ ಕೊಡುಗೆ

Update: 2024-09-12 22:20 IST

ಮಂಗಳೂರು: ಸೀರತ್ ಅಭಿಯಾನದ ಪ್ರಯುಕ್ತ ಇಂದು ಬೆಂಗಳೂರಿನ ಕಾವೇರಿ ಭವನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ ಭೇಟಿಯಾಗಿ ಶಾಂತಿ ಪ್ರಕಾಶನದ ವತಿಯಿಂದ ಪ್ರಕಟಗೊಂಡ ಹೊಸ ಕೃತಿ ಪ್ರವಾದಿ ಮುಹಮ್ಮದ್ (ಸ) ಲೇಖನಗಳ ಸಂಕಲನವನ್ನು ನೀಡಿದರು.

ಈ ಸಂದರ್ಭದಲ್ಲಿ ಅಭಿಯಾನದ ಸಂದರ್ಭದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ವಿವರಿಸಿದರು.

ಕೃತಿಯನ್ನು ಪಡೆದ ಮುಖ್ಯಮಂತ್ರಿಗಳು ಅದರ ಮೇಲೆ ಕಣ್ಣಾಡಿಸಿ ಅಭಿಯಾನದ ಯಶಸ್ಸಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಜ. ನಸೀರ್ ಅಹ್ಮದ್, ಹಿರಿಯ IAS ಅಧಿಕಾರಿ L.K ಅತೀಕ್ ಅಹ್ಮದ್, ಜಮಾಅತ್ ರಾಜ್ಯ ಮಾಧ್ಯಮ ಜತೆ ಕಾರ್ಯದರ್ಶಿ ಮುಹಮ್ಮದ್ ತಲ್ಹಾ ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News