×
Ad

ಸೆ.16: ಮಂಗಳೂರಿಗೆ ನೀರು ಪೂರೈಕೆ ಇಲ್ಲ

Update: 2025-09-12 22:23 IST

ಮಂಗಳೂರು,ಸೆ.12:ಮಂಗಳೂರು ಮಹಾನಗರಪಾಲಿಕಾ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದಲ್ಲಿ ಹಾಗೂ ಮೆಸ್ಕಾಂನವರ ತುರ್ತು ದುರಸ್ತಿ ಕಾಮಗಾರಿ ಇರುವ ಕಾರಣ ಸೆ.16ರಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಮಂಗಳೂರು ನಗರಕ್ಕೆ ಸಂಪೂರ್ಣವಾಗಿ ನೀರು ನಿಲುಗಡೆಗೊಳಿಸಲಾಗುತ್ತಿದೆ.

ಹಾಗಾಗಿ ಸೆ.16ರಂದು ನಗರದಲ್ಲಿ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದೆಂದು ಮಹಾನಗರಪಾಲಿಕೆ ಕಾರ್ಯಪಾಲಕ ಅಭಿಯಂತರರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News