ಕುದ್ರೋಳಿ ದಸರಾದಲ್ಲಿ ಎಂ.ಫ್ರೆಂಡ್ಸ್ ಗೆ "ಸೇವಾಸಿರಿ-2025" ಪ್ರಶಸ್ತಿ ಪ್ರದಾನ
ಮಂಗಳೂರು: 12 ವರ್ಷಗಳಿಂದ ಸರ್ವಧರ್ಮೀಯರಿಗೆ ಮಾನವೀಯ ಸೇವೆ ಸಲ್ಲಿಸುತ್ತಿರುವ ಕರಾವಳಿಯ ಪ್ರತಿಷ್ಠಿತ ಸೇವಾ ಸಂಸ್ಥೆ ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟಿಗೆ ಕುದ್ರೋಳಿ ದಸರಾ ಕಾರ್ಯಕ್ರಮದಲ್ಲಿ "ಸೇವಾಸಿರಿ-2025" ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಶ್ರೀ ಗೋಕರ್ಣನಾಥ ಕ್ಷೇತ್ರದ ಸಂತೋಷಿ ಕಲಾ ಮಂಟಪದಲ್ಲಿ ನಡೆದ ಆಧ್ಯಾತ್ಮಿಕ ಸಮಾರಂಭದಲ್ಲಿ ಎಂ. ಫ್ರೆಂಡ್ಸ್ ಚೆಯರ್‌ಮ್ಯಾನ್ ಝಕರಿಯಾ ಅಲ್ ಮುಝೈನ್ ಜೋಕಟ್ಟೆ ಅವರು ಸೇವಾಸಿರಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪಣಂಬೂರು ಎನ್.ಎಂ.ಪಿ.ಎ. ಚೆಯರ್‌ಮ್ಯಾನ್ ಡಾ. ವೆಂಕಟರಮಣ ಅಕ್ಕರಾಜು, ಯೂನಿಯನ್ ಬ್ಯಾಂಕ್ ಮಂಗಳೂರು ವಲಯ ಮುಖ್ಯಸ್ಥರಾದ ರಾಜೇಂದ್ರ ಕುಮಾರ್, ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಪ್ರಮುಖರಾದ ನರಸಿಂಹ ಕುಮಾರ್, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜಯರಾಜ್ ಎಚ್. ಸೋಮಸುಂದರಮ್, ಕಾರ್ಯದರ್ಶಿ ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಎಂ. ಫ್ರೆಂಡ್ಸ್ ಸಂಸ್ಥೆಯ ಪ್ರಮುಖರಾದ ಮಹಮ್ಮದ್ ಹನೀಫ್ ಗೋಳ್ತಮಜಲು, ರಶೀದ್ ವಿಟ್ಲ, ಮಹಮ್ಮದ್ ಆರಿಫ್ ಪಡುಬಿದ್ರಿ, ಕುದ್ರೋಳಿ ಕ್ಷೇತ್ರದ ಟ್ರಸ್ಟಿಗಳು, ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಾನಿಧ್ಯ ವಿಶೇಷ ಮಕ್ಕಳ ಸಂಸ್ಥೆ ಹಾಗೂ ವೈಟ್ ಡೌ ಟ್ರಸ್ಟನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.
ಎಂ. ಫ್ರೆಂಡ್ಸ್ ಸಂಸ್ಥೆ ಸಮಾಜಮುಖಿ ಚಟುವಟಿಕೆಗಳ ಮೂಲಕ ಅನೇಕ ಜನರ ಬದುಕಿಗೆ ಸ್ಪೂರ್ತಿ, ಬೆಂಬಲ ಮತ್ತು ಬೆಳಕು ತುಂಬಿದ ಮಹತ್ತರ ಸೇವೆ ಸಲ್ಲಿಸುತ್ತಿರುವುದನ್ನು ಪರಿಗಣಿಸಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ 2025ನೇ ಸಾಲಿನ ಸೇವಾಸಿರಿ ಪ್ರಶಸ್ತಿಯನ್ನು ನೀಡಿದೆ.