×
Ad

ಎಸ್‌ವೈಎಸ್ ಮೀಲಾದ್ ರ‍್ಯಾಲಿ ಯಶಸ್ವಿಗೆ ಶೈಖುನಾ ಎಂಟಿ ಉಸ್ತಾದ್ ಕರೆ

Update: 2023-09-24 18:28 IST

ಮಂಗಳೂರು, ಸೆ.24: ಪ್ರವಾದಿ ಜನ್ಮದಿನಾಚರಣೆಯ ಅಂಗವಾಗಿ ಎಸ್‌ವೈಎಸ್ ಕೇಂದ್ರ ಸಮಿತಿಯು ಪ್ರವಾದಿ ಸ್ನೇಹ, ಸಮತ್ವ, ಸಹಿಷ್ಣುತೆ ಎಂಬ ಧ್ಯೇಯವಾಕ್ಯದೊಂದಿಗೆ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಂಡ ಮೀಲಾದ್ ರ‍್ಯಾಲಿಯನ್ನು ಯಶಸ್ವಿ ಗೊಳಿಸಬೇಕು ಎಂದು ಕೇಂದ್ರ ಸಮಸ್ತ ಮುಶಾವರ ನಾಯಕ, ಸಮಸ್ತ ಶಿಕ್ಷಣ ಮಂಡಳಿಯ ಪ್ರಧಾನ ಕಾರ್ಯದರ್ಶಿ ಶೈಖುನಾ ಎಂಟಿ ಉಸ್ತಾದ್ ಕರೆ ನೀಡಿದ್ದಾರೆ.

ದ.ಕ.ಜಿಲ್ಲಾ ಎಸ್‌ವೈಎಸ್ ವತಿಯಿಂದ ಅ.15ರಂದು ಬಿಸಿ ರೋಡ್‌ನಲ್ಲಿ ಜರುಗುವ ಮೀಲಾದ್ ರ್ಯಾಲಿಯ ಪ್ರಚಾರಾರ್ಥ ಮುಲ್ಕಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ದ.ಕ.ಜಿಲ್ಲಾ ಸಮಸ್ತ ಮದ್ರಸ ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ, ಸ್ವಾಗತ ಸಮಿತಿಯ ಅಧ್ಯಕ್ಷ ರಫೀಕ್ ಹಾಜಿ ಕೊಡಾಜೆ, ಸಲೀಮ್ ಫೈಝಿ ಮುಲ್ಕಿ, ಅಬ್ದುಲ್ಲಾ ದಾರಿಮಿ ಮುಲ್ಕಿ, ರಝಾಕ್ ಮದನಿ ಮುಲ್ಕಿ, ಸುರತ್ಕಲ್ ಎಸ್‌ವೈಎಸ್ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಮುಲ್ಕಿ ಮಸೀದಿಯ ಅಧ್ಯಕ್ಷ ಎಂಕೆ ಹೈದರ್ ಸುಹೈಲ್, ಸ್ವಾಗತ್ ಅಬೂಬಕರ್ ದೇರಳಕಟ್ಟೆ, ಮುಹಮ್ಮದ್ ಪಣಿಯೂರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News