×
Ad

ಶಿರಾಡಿ ಘಾಟ್: ಟ್ಯಾಂಕರ್ ಪಲ್ಟಿ

Update: 2025-07-28 22:02 IST

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಶಿರಾಡಿ ಘಾಟ್ ಪರಿಸರದಲ್ಲಿ ಟ್ಯಾಂಕರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ಬದಿಗೆ ಮಗುಚಿ ಬಿದ್ದ ಘಟನೆ ಸೋಮವಾರ ಸಂಭವಿಸಿದೆ.

ಶಿರಾಡಿ ಗಡಿ ದೇವಸ್ಥಾನದ ಮೇಲ್ಭಾಗದ ಪರಿಸರದಲ್ಲಿ ಈ ಘಟನೆ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಟ್ಯಾಂಕರ್ ಗುಂಡ್ಯ ಹೊಳೆಗೆ ಬೀಳುವ ಸಾಧ್ಯತೆ ಇತ್ತಾದರೂ ಹೆದ್ದಾರಿ ಬದಿಯ ಮರಗಳು ತಡೆದಂತಿತ್ತು. ಘಟನಾ ಸ್ಥಳಕ್ಕೆ ಸಕಲೇಶಪುರ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News