×
Ad

ಸುರತ್ಕಲ್‌ನಲ್ಲಿ ಸಿಗ್ನಲ್ ವ್ಯವಸ್ಥೆ ಮರು ಜೋಡಣೆ: ಜು.23-24ರಂದು ರೈಲು ಸಂಚಾರ ವ್ಯತ್ಯಯ

Update: 2025-07-22 20:55 IST

ಮಂಗಳೂರು, ಜು.22: ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಸಿಗ್ನಲ್ ವ್ಯವಸ್ಥೆ ಮರು ಜೋಡಣೆಯ ಹಿನ್ನೆಲೆಯಲ್ಲಿ ಜು.23ಮತ್ತು 24ರಂದು ಸಂಚರಿಸುವ ಕೆಲವು ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ.

ಜು.23ರಂದು ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ವಂದೇ ಭಾರತ್ ಎಕ್ಸ್‌ಪ್ರೆಸ್ (20646) ತೋಕೂರು ನಿಲ್ದಾಣದಲ್ಲಿ 35 ನಿಮಿಷ ತಡೆಹಿಡಿಯಲ್ಪಡಲಿದೆ. ಲೋಕಮಾನ್ಯ ತಿಲಕ್(ಟಿ)-ಮಂಗಳೂರು ಸೆಂಟ್ರಲ್ ಮತ್ಸೃಗಂಧ ಎಕ್ಸ್‌ಪ್ರೆಸ್ (12619) ಉಡುಪಿ ಮತ್ತು ಮುಲ್ಕಿ ನಿಲ್ದಾಣಗಳ ನಡುವೆ 55 ನಿಮಿಷ ವಿಳಂಭವಾಗಲಿದೆ.

ಜು.24ರಂದು ಶ್ರೀ ಗಂಗಾನಗರ-ತಿರುವನಂತಪುರಂ ನಾರ್ತ್ ಎಕ್ಸ್‌ಪ್ರೆಸ್ ಉಡುಪಿ ಮತ್ತು ಮುಲ್ಕಿ ನಿಲ್ದಾಣಗಳ ನಡುವೆ ಸುಮಾರು 50 ನಿಮಿಷ ತಡೆಹಿಡಿಯಲ್ಪಡಲಿದೆ. ಲೋಕಮಾನ್ಯ ತಿಲಕ್(ಟಿ)-ಮಂಗಳೂರು ಸೆಂಟ್ರಲ್ ಮತ್ಸೃಗಂಧ ಎಕ್ಸ್‌ಪ್ರೆಸ್ ಉಡುಪಿ ಮತ್ತು ಮುಲ್ಕಿ ನಡುವೆ ಸುಮಾರು 20 ನಿಮಿಷ ವಿಳಂಭವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News