ಸಿಮ್ ಕಾರ್ಡ್ ವಂಚನೆ ಪ್ರಕರಣ: ಇಬ್ಬರ ಬಂಧನ
Update: 2024-08-14 22:31 IST
ಮಂಗಳೂರು: ಸಿಮ್ ಕಾರ್ಡ್‌ಗಳನ್ನು ಸೈಬರ್ ವಂಚಕರಿಗೆ ನೀಡುವ ಸಲುವಾಗಿ ಅವುಗಳನ್ನು ಖರೀದಿಸುತ್ತಿದ್ದ ಇಬ್ಬರನ್ನು ಮಂಗಳೂರಿನ ಸೆನ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮೂಲತಃ ಬೆಳ್ತಂಗಡಿಯ ಪ್ರಸಕ್ತ ನಗರದ ಮರೋಳಿ ಸಮೀಪದ ಬಜ್ಜೋಡಿಯಲ್ಲಿ ವಾಸವಾಗಿದ್ದ ಸಮದ್ ಮತ್ತು ಅಜೀಂ ಬಂಧಿತ ಆರೋಪಿಗಳು. ಏರ್‌ಟೆಲ್ ಕಂಪೆನಿಯ 86 ಸಿಮ್ ಕಾರ್ಡ್‌ಗಳು, 2 ಮೊಬೈಲ್ ಪೋನ್ ಮತ್ತು ಕಾರನ್ನು ಇವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ 5,49,300 ರೂ. ಆಗಿದೆ.
ಆರೋಪಿಗಳು ಬೆಳ್ತಂಗಡಿಯ ಮುಸ್ತಫ ಮತ್ತು ಮಡಂತ್ಯಾರ್‌ನ ಸಾಜೀದ್‌ನ ಸೂಚನೆಯಂತೆ ವಿದೇಶಕ್ಕೆ ಮಾರಾಟ ಮಾಡಲು ಗೆಳೆಯರನ್ನು ಪುಸಲಾಯಿಸಿ ಸಿಮ್‌ಕಾರ್ಡ್‌ಗಳನ್ನು ಪಡೆದುಕೊಂಡಿರುವುದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.