ನ.18ರಂದು ಎಸ್‌ಜೆಎಂ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ಜಾನ್
ಮಂಗಳೂರು : ಮದ್ರಸ ಅಧ್ಯಾಪಕರುಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಎಸ್ ಜೆ ಎಂ ಕರ್ನಾಟಕ ರಾಜ್ಯ ಹಮ್ಮಿಕೊಂಡ ಮುಅಲ್ಲಿಂ ಮೆಹರ್ಜಾನ್ ಇದರ ರಾಜ್ಯ ಮಟ್ಟದ ಸಮಾರಂಭ ಚಿಕ್ಕಮಗಳೂರು ಜಿಲ್ಲೆಯ ಉಪ್ಪಳ್ಳಿಯ ಶಾದ್ಸುಲೀ ಜುಮಾ ಮಸ್ಜಿದ್ ವಠಾರದಲ್ಲಿ ನ.18 ರಂದು ನಡೆಯಲಿದೆ.
ಸ್ವಾಗತ ಸಮಿತಿ ಚೇರ್ಮಾನ್ ಉಸ್ಮಾನ್ ಹಾಜಿ ಹಂಡುಗುಳಿ ಧ್ವಜಾರೋಹಣಗೈಯಲಿರುವರು. ಉದ್ಘಾಟನಾ ಸಮಾರಂಭವು ಬೆಳಿಗ್ಗೆ 07 - 30 ಕ್ಕೆ ನಡೆಯಲಿದ್ದು, ಎಸ್ ಜೆ ಯು ಚಿಕ್ಕಮಗಳೂರು ಜಿಲ್ಲೆ ಅಧ್ಯಕ್ಷರಾದ ಅಸ್ಸಯ್ಯಿದ್ ಎಪಿಎಸ್ ತಂಙಳ್ ಉಪ್ಪಳ್ಳಿ ದುಆ ನೆರವೇರಿಸಲಿರುವರು. ಎಸ್ ಜೆ ಎಂ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು ಅಧ್ಯಕ್ಷತೆ ವಹಿಸಲಿರುವರು. ಎಸ್ ಎಂ ಎ ರಾಜ್ಯಾಧ್ಯಕ್ಷರಾದ ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಉದ್ಘಾಟಿಸಲಿರುವರು.
ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್ಜಾನ್ ಸ್ಪರ್ಧೆಗಳಲ್ಲಿ ಒಟ್ಟು ಹತ್ತು ಜಿಲ್ಲೆಗಳ 240ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗವಹಿಸಲಿದ್ದು, ಮೂರು ವೇದಿಕೆಗಳಲ್ಲಿ ಹೈಝೋನ್ ಮತ್ತು ಗ್ರೌಂಡ್ ಝೋನ್ ವಿಭಾಗದಲ್ಲಿ 39 ಸ್ಪರ್ಧೆಗಳು ನಡೆಯಲಿವೆ.
ಅಸ್ಸಯ್ಯಿದ್ ಸ್ವಾಲಿಹ್ ತಂಙಳ್ ಉಪ್ಪಳ್ಳಿ ಟ್ರೋಫಿ ವಿತರಣೆ ನಡೆಸಲಿರುವರು.