×
Ad

ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯಕ್ಕೆ ಅಮಾಯಕ ಯುವಕ ಬಲಿ: ಎಸ್ಕೆಎಸ್ಸೆಸ್ಸೆಫ್

Update: 2025-05-27 23:43 IST

ಮಂಗಳೂರು: ಕೊಳತ್ತಮಜಲು ಮಸೀದಿಯ ಕಾರ್ಯದರ್ಶಿ ಹಾಗೂ SKSSF ಕಾರ್ಯಕರ್ತ ಅಬ್ದುಲ್ ರಹ್ಮಾನ್ ಹತ್ಯೆಯು ಕರ್ನಾಟಕದ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದಿಂದ ನಡೆದಿದೆ ಮತ್ತು ಈ ಕೊಲೆಗೆ ಕಾಂಗ್ರೆಸ್ ಸರಕಾರ ನೇರ ಹೊಣೆಯಾಗಿದೆ.

ಜಿಲ್ಲೆಯಲ್ಲಿ ಆಶ್ರಫ್ ಕೊಲೆ ಆರೋಪಿಗಳ ಬಂಧನ ಹಾಗೂ ದ್ವೇಷ ಭಾಷಣಗಾರರ ಬಂಧನ ನಡೆಯಲೇ ಇಲ್ಲ. ಕೇವಲ ಕೇಸು ದಾಖಲಿಸಿ ಕಣ್ಣೋರೆಸುವ ತಂತ್ರ ವನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಆಂಟಿ ಕಮ್ಮುನಲ್ ಪೋರ್ಸ್ ಎಂಬುದು ಹೇಳಿಕೆಗೆ ಸೀಮಿತವಾಗಿದೆ. ಅಬ್ದುಲ್ ರಹ್ಮಾನ್ ರವರ ಕೊಲೆ ಆರೋಪಿಗಳನ್ನು ಕೂಡಲೇ ಬಂದಿಸಬೇಕು. ಸರಕಾರ ಮೃತರ ಕುಟುಂಬ ಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು.

ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯದ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಅದೇ ರೀತಿ ಗೃಹ ಸಚಿವರನ್ನು ಮತ್ತು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ವಜಾಗೊಳಿಸಬೇಕು ಎಂದು SKSSF ದ.ಕ ಜಿಲ್ಲಾ ಸಮಿತಿ ಅಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News