×
Ad

ಮಹಿಳೆಯರು ಸಶಕ್ತರಾದಾಗ ಸಮಾಜ ಬೆಳೆಯುತ್ತದೆ : ರಶ್ಮಿತಾ ಜೈನ್

Update: 2025-11-11 18:16 IST

ಮೂಡುಬಿದಿರೆ: ಮಹಿಳೆ ಜೀವಂತಿಕೆಯ ಸಂಕೇತ. ಮಹಿಳೆಯರು ಸಶಕ್ತರಾದಾಗ ಸಮಾಜ ಬೆಳೆಯುತ್ತದೆ. ಧರ್ಮದ ತಳಹದಿಯಲ್ಲಿ ಮಹಿಳೆಯರು ಒಗ್ಗೂಡಿದಾಗ ಧರ್ಮ ಸಂಸ್ಕೃತಿ ಉಳಿಯುತ್ತದೆ. ಪ್ರತಿಭೆ ಎಂಬುದು ದೇವರು ಕೊಟ್ಟ ವರ. ಅದನ್ನು ವಿಕಸನಗೊಳಿಸಿ ಸಾಧನೆಯ ಪಥದಲ್ಲಿ ಮುನ್ನಡೆಯಬೇಕು ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಹೇಳಿದರು.

ಅವರು ಇಲ್ಲಿನ ಕಾಳಿಕಾಂಬಾ ಮಹಿಳಾ ಸಮಿತಿಯ ರಜತ ಸಂಭ್ರಮದಂಗವಾಗಿ ಕಾಳಿಕಾಂಬಾ ದೇವಸ್ಥಾನದ ವಿಶ್ವಕರ್ಮ ಸಭಾಭವನದಲ್ಲಿ ಭಾನುವಾರ ವಿಶ್ವಕರ್ಮ ಮಹಿಳೆಯರಿಗಾಗಿ ನಡೆದ ಅವಿಭಜಿತ ದ.ಕ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕ್ಷೇತ್ರದ ಮೊಕ್ತೇಸರರಾದ ಶಿವರಾಮ ಆಚಾರ್ಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿಯ ಉಪಾಧ್ಯಕ್ಷ ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.

ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.

ಫಲಿತಾಂಶ :

ಸಾಂಸ್ಕೃತಿಕ ಸ್ಪರ್ಧೆ : ವಿಶ್ವ ಬ್ರಾಹ್ಮಣ ಮಹಿಳಾ ಬಳಗ ಮುಂಡ್ಕೂರು (ಪ್ರಥಮ), ವಿ ಎಸ್ ಡಿ ಶೋ ಮಾಸ್ಟರ್ಸ್ ಉಜಿರೆ (ದ್ವಿತೀಯ), ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿ ನೆಕ್ಲಾಜೆ ಕಾರ್ಕಳ (ತೃತೀಯ)

ರಂಗೋಲಿ ಸ್ಪರ್ಧೆ : 18 ವರ್ಷ ಮೇಲ್ಪಟ್ಟ ವಿಭಾಗ : ಶುಭಾ ಕೇಶವ ಆಚಾರ್ಯ ಕಿನ್ನಿಗೋಳಿ (ಪ್ರಥಮ), ತ್ರಿಶಾ ಆಚಾರ್ಯ ಮೂಡುಬಿದಿರೆ (ದ್ವಿತೀಯ), ಪ್ರಜ್ಞಾ ಆಚಾರ್ಯ ಮುರಗೋಳಿ (ತೃತೀಯ), ವಿದ್ಯಾ ವಿಶ್ವೇಶ್ ಆಚಾರ್ಯ ಮಣಿಪಾಲ, ವಾರಿಜಾ ಜಯರಾಮ್ ಆಚಾರ್ಯ ಕಾರ್ಕಳ (ಸಮಾಧಾನಕರ)

ರಂಗೋಲಿ ಸ್ಪರ್ಧೆ 18 ವರ್ಷ ಕೆಳಗಿನವರು : ವೈಷ್ಣವಿ ಆಚಾರ್ಯ ಮಣಿಪಾಲ (ಪ್ರಥಮ), ತೇಜಸ್ವಿನಿ ಶರಣ್ಯ ಮೂಡುಬಿದಿರೆ (ದ್ವಿತೀಯ), ವರ್ಷಿಣಿ ತನ್ವಿ ಟಿ ಮೂಡುಬಿದಿರೆ (ತೃತೀಯ), ಪ್ರತೀಕ್ಷಾ ತಜ್ಞತಾ ಮೂಡುಬಿದಿರೆ, ವೈಷ್ಣವಿ ಶರಣ್ಯ ಬೆಳಾಲು (ಸಮಾಧಾನಕರ)

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News