ವಿಶ್ವ ಅಂಗವಿಕಲರ ದಿನಾಚರಣೆ : ಬೆಳುವಾಯಿ ಸ್ಫೂರ್ತಿ ವಿಶೇಷ ಮಕ್ಕಳಿಂದ ಜಾಗೃತಿ ಜಾಥಾ
ಮೂಡುಬಿದಿರೆ, ಡಿ.4: ವಿಶ್ವ ಅಂಗವಿಕಲರ ದಿನಾಚರಣೆಯ ಪ್ರಯುಕ್ತ ಪೊಲೀಸ್ ಇಲಾಖೆ, ಗ್ರಾಮ ಪಂಚಾಯತ್ ಬೆಳುವಾಯಿ ಹಾಗೂ ರಿಕ್ಷಾ ಚಾಲಕ, ಮಾಲಕರ ಸಂಘ ಬೆಳುವಾಯಿ ಇವುಗಳ ಸಹಕಾರದೊಂದಿಗೆ ಬೆಳುವಾಯಿ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಶಾಲೆಯ ವಿಶೇಷ ಚೇತನ ಮಕ್ಕಳಿಂದ ವಿಶೇಷ ಚೇತನರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜನಜಾಗೃತಿ ಜಾಥಾ ಗುರುವಾರ ನಡೆಯಿತು.
ಬೆಳುವಾಯಿ ಷಣ್ಮುಖಾನಂದ ಹಾಲ್ ಬಳಿಯಿಂದ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯವರೆಗೆ ನಡೆದ ಜಾಥಾಕ್ಕೆ ಬೆಳುವಾಯಿ ಷಣ್ಮುಖಾನಂದ ಹಾಲ್‌ನ ಮಾಲಕ ಅಣ್ಣಿ ಪೂಜಾರಿ ಆಣೆಬೆಟ್ಟು ಚಾಲನೆ ನೀಡಿದರು.
ಬೆಳುವಾಯಿ ರಿಕ್ಷಾ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಸುಭಾಸ್ ಪೈ, ವ್ಯವಸಾಯ ಸಹಕಾರಿ ಬ್ಯಾಂಕ್ ಬೆಳುವಾಯಿ ಇದರ ನಿರ್ದೇಶಕ ರಾಮ್ ಪ್ರಸಾದ್, ಸ್ಫೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪಕ ಪ್ರಕಾಶ್ ಜೆ. ಶೆಟ್ಟಿಗಾರ್, ಶಿಕ್ಷಕ ರಕ್ಷಕ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಉಪಸ್ಥಿತರಿದ್ದರು.
ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ)ಮಂಗಳೂರು ಇದರ ಅರ್ಜುನ್ ಭಂಡಾರ್ಕರ್ ಅವರು ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡಿ ಪ್ರೋತ್ಸಾಹಿಸಿದರು.
ಶಿಕ್ಷಕಿ ಅನಿತಾ ರೋಡ್ರಿಗಸ್ ಸ್ವಾಗತಿಸಿದರು. ಸುಚಿತ್ರಾ ನಿರೂಪಿಸಿದರು.