×
Ad

ಸೋಮೇಶ್ವರ: ʼಕೃಷಿಯಡೆಗೆ ವಿದ್ಯಾರ್ಥಿ ಸಮೂಹ ಹಾಗೂ ಯುವಜನತೆಯ ನಡೆʼ ಕಾರ್ಯಕ್ರಮ

Update: 2025-08-30 21:52 IST

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ (ನಿ.) ಕೋಟೆಕಾರು, ಮಾಧ್ಯಮ ಕೇಂದ್ರ ತೊಕ್ಕೊಟ್ಟು, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ (ರಿ.), ದ.ಕ. ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ (ರಿ.) ಮಂಗಳೂರು ಇವರ ನೇತೃತ್ವದಲ್ಲಿ ಹಾಗೂ ಕೃಷಿ ಇಲಾಖೆ ಮಂಗಳೂರು, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಪಿಲಾರು ಸಹಯೋಗದಲ್ಲಿ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇವರ ತಾಂತ್ರಿಕ ಮಾರ್ಗದರ್ಶನದೊಂದಿಗೆ ``ಕೃಷಿಯಡೆಗೆ ವಿದ್ಯಾರ್ಥಿ ಸಮೂಹ ಹಾಗೂ ಯುವಜನತೆಯ ನಡೆ'' ಎಂಬ ಕಾರ್ಯಕ್ರಮಕ್ಕೆ ಇಂದು ಸೋಮೇಶ್ವರ ಗ್ರಾಮದ ಪಿಲಾರು ಬೈಲು ಗದ್ದೆಯಲ್ಲಿ ಚಾಲನೆ ದೊರೆಯಿತು.

ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಕೋಟೆಕಾರುಗುತ್ತು ಅಧ್ಯಕ್ಷ ಹಾಗೂ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘ (ನಿ.) ಅಧ್ಯಕ್ಷ ಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರುಗಳಾದ ಅಬುಸಾಲಿ, ನಿರ್ದೇಶಕರುಗಳಾದ ಕೃಷ್ಣಪ್ಪ ಸಾಲ್ಯಾನ್, ಅರುಣ್ ತೊಕ್ಕೊಟ್ಟು, ಸುರೇಖಾ ಚಂದ್ರಹಾಸ್, ಗಂಗಾಧರ್ ಉಳ್ಳಾಲ್, ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಡಾ. ಹೊನ್ನಪ್ಪ ಗೋವಿಂದ ಗೌಡ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮುಖ್ಯಸ್ಥರು ಡಾ. ಟಿ.ಜೆ. ರಮೇಶ್, ಸಾಮಾಜಿಕ ಕಾರ್ಯಕರ್ತರು ಮತ್ತು ಅನಿವಾಸಿ ಭಾರತೀಯರಾದ ಪ್ರವೀಣ್ ಶೆಟ್ಟಿ ಮೇಗಿನಮನೆ ಮಸ್ಕತ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಶ್ರೀನಿವಾಸ ಇಂದಾಜೆ, ದ.ಕ. ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷರು ಜಯಾನಂದ ಎನ್. ಸುವರ್ಣ, ಸೋಮೇಶ್ವರ ಪುರಸಭೆ ಅಧ್ಯಕ್ಷ ರವಿಶಂಕರ್ ಸೋಮೇಶ್ವರ, ಸೋಮೇಶ್ವರ ಪುರಸಭೆಯ ಉಪಾಧ್ಯಕ್ಷರು ಸಪ್ನ ಶೆಟ್ಟಿ, ಪುರುಷೋತ್ತಮ್ ಶೆಟ್ಟಿ, ದೀಪಕ್ ಪಿಲಾರ್, ಸದಸ್ಯರು ಪುರಂದರ ದಾಸ್, ಶ್ರೀಧರ್ ಆಳ್ವ, ಶ್ರೀ ಬಾಲಾಂಜನೇಯ ವ್ಯಾಯಾಮ ಶಾಲೆ ಪಿಲಾರು ಅಧ್ಯಕ್ಷರು ಉಪಸ್ಥಿತರಿದ್ದರು.

ಗೌರವ ಉಪಸ್ಥಿತಿಯಲ್ಲಿ ಈಶ್ವರ ಶೆಟ್ಟಿ ಪಿಲಾರು ಮೇಲ್ಮನೆ, ಗಂಗಯ್ಯ ಗಟ್ಟಿ ಪಿಲಾರು ಹೊಸಮನೆ, ಸೀತಾರಾಮ ಶೆಟ್ಟಿ ಪಿಲಾರು ಮೇಗಿನಮನೆ ಮುಂತಾದ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಕೃಷಿ ಅಧ್ಯಯನ ಮತ್ತು ಕೃಷಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳುವ ಕುರಿತು ಮಾರ್ಗದರ್ಶನ ನೀಡಲಾಯಿತು. ಗ್ರಾಮ-ಕೃಷಿ ಸಂಪರ್ಕ ಬೆಳೆಸುವ ಉದ್ದೇಶ ದಿಂದ ವಿವಿಧ ಕಾರ್ಯಾಗಾರಗಳು, ಪ್ರದರ್ಶನಗಳು ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಚಾಲನೆ ದೊರೆಯಿತು.

ಕೊಣಾಜೆ ವಿಶ್ವಮಂಗಳ ಪದವಿಪೂರ್ವ ಕಾಲೇಜು, ಬಬ್ಬುಕಟ್ಟೆಯ ಹಿರಾ ಪದವಿಪೂರ್ವ ಕಾಲೇಜು, ಸರಕಾರಿ ಪದವಿಪೂರ್ವ ಕಾಲೇಜು ನಾಲ್ಯಪದವು, ಸರಕಾರಿ ಪದವಿಪೂರ್ವ ಕಾಲೇಜು ಹಂಪನಕಟ್ಟೆ, ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ಅಸೈಗೋಳಿ, ಟಿಪ್ಪು ಸುಲ್ತಾನ್ ಪದವಿಪೂರ್ವ ಕಾಲೇಜು ಒಂಭತ್ತುಕೆರೆ, ಕಣಚೂರು ಪದವಿಪೂರ್ವ ಕಾಲೇಜು ದೇರಳಕಟ್ಟೆ, ಕುನಿಲ್ ಪದವಿಪೂರ್ವ ಕಾಲೇಜು ನಾಟೆಕಲ್, ಸಂತ ಸೆಬಾಸ್ತಿಯನ್ ಪದವಿಪೂರ್ವ ಕಾಲೇಜು ಪೆರ್ಮನ್ನೂರು, ನಿಟ್ಟೆ ಶಂಕರ ಅಡ್ಯಂತಾಯ ಪದವಿಪೂರ್ವ ಕಾಲೇಜು ನಂತೂರು, ಕಿಟ್ಟೆಲ್ ಪದವಿಪೂರ್ವ ಕಾಲೇಜು ಗೋರಿಗುಡ್ಡ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News