×
Ad

ಜರ್ಮನಿಯ ಬವೇರಿಯಕ್ಕೆ ಸ್ಪೀಕರ್ ಖಾದರ್ ಭೇಟಿ

Update: 2024-10-10 21:40 IST

ಬೆಂಗಳೂರು : ಹಾನ್ಸ್ ಸೀಡಲ್ ಸ್ಟಿಫ್‍ಟಂಗ್ ಪೌಂಡೇಶನ್ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬವೇರಿಯಾದ ಹಾನ್ಸ್ ಸೀಡಲ್ ಸ್ಟಿಫ್‍ಟಂಗ್ ಪೌಂಡೇಶನ್‍ನ ಅಧ್ಯಕ್ಷರ ಆಹ್ವಾನದ ಮೇರೆಗೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ನಿಯೋಗವು ಜರ್ಮನಿ ರಾಷ್ಟ್ರದ ಬವೇರಿಯಕ್ಕೆ ಭೇಟಿ ನೀಡಿತು.

ಈ ವೇಳೆ ಬವೇರಿಯಾದಲ್ಲಿರುವ ಸೌತ್ ಜರ್ಮನಿಯ ಭಾರತದ ಕಾನ್ಸಲ್ ಜನರಲ್ ಆಫ್ ಇಂಡಿಯಾ ಶತ್ರುಘ್ನ ಸಿಕ್ಕ ಅವರನ್ನು ಭೇಟಿ ಮಾಡಿ, ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕರಾದ ಮಹಂತೇಶ್ ಕೌಜಲಗಿ, ಉಮಾನಾಥ್ ಕೋಟ್ಯಾನ್, ಅಶೋಕ್ ಕುಮಾರ್ ರೈ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News