×
Ad

ಸ್ಪೀಡ್ ರೋಲರ್ ಸ್ಕೇಟಿಂಗ್: ಅಕ್ಷರ್ ಶೆಟ್ಟಿಗೆ ಚಿನ್ನದ ಪದಕ

Update: 2023-10-20 19:13 IST

ಮಂಗಳೂರು, ಅ.20: ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಅಸೋಸಿಯೇಶನ್ ಹೊಯ್ಗೆಬೈಲ್ ಬಳಿಯ ಸ್ಕೇಟಿಂಗ್ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್‌ನಲ್ಲಿ ಕುಳಾಯಿ ರೆಹಾನಾ ಸ್ಕೂಲ್‌ನ ವಿದ್ಯಾರ್ಥಿ ಅಕ್ಷರ್ ಜೆ ಶೆಟ್ಟಿ ಸುರತ್ಕಲ್ ಕ್ವಾಡ್ 1 ಲ್ಯಾಪ್ ರೋಡ್ ರೇಸ್‌ನಲ್ಲಿ ಚಿನ್ನದ ಪದಕ ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಅಕ್ಷರ್ ಜೆ ಶೆಟ್ಟಿ ಪ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮತ್ತು ಎಚ್ ಪಿಸಿಎಲ್ ಉದ್ಯೋಗಿ ಚಿತ್ರಾ ಜೆ ಶೆಟ್ಟಿಯವರ ಪುತ್ರ. ಈತ ಅನಘ ಸ್ಕೇಟಿಂಗ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, ದೀಪಾಂಶು ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಸಾಧಕ ಸ್ಕೇಟಿಂಗ್ ಪಟುಗಳಿಗೆ ಮೇಯರ್ ಸುಧೀರ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಕಾರ್ಪೋರೇಟರ್ ಗಣೇಶ್ ಕುಲಾಲ್, ದ.ಕ. ರೋಲರ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಫ್ರಾನ್ಸಿಸ್ ಕೊನ್ಸೆಸೋ, ಕಾರ್ಯದರ್ಶಿ ಮಹೇಶ್ ಕುಮಾರ್, ಪ್ರವೀಣ್ ಕುಮಾರ್, ಸಂತೋಷ್ ಶೆಟ್ಟಿ, ಜಯರಾಜ್, ಲೆಸ್ಟರ್ ಡಿ ಸೋಜ, ಉಮೇಶ್ ಗಟ್ಟಿ, ಅರ್ಶದ್ ಮತ್ತು ಮುಖ್ಯ ತೀರ್ಪುಗಾರ ಅಂತೋಣಿ ಜೇಮ್ಸ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News