ಕೊಳತ್ತಮಜಲು ಯುವಕನ ಕೊಲೆ ಪ್ರಕರಣ: ಎಸ್ ಎಸ್ ಎಫ್ ದ.ಕ ವೆಸ್ಟ್ ಖಂಡನೆ
Update: 2025-05-27 23:52 IST
ಮಂಗಳೂರು: ಕೊಳತ್ತಮಜಲುವಿನಲ್ಲಿ ಯುವಕ ಅಬ್ದುಲ್ ರಹಿಮಾನ್ ಕೊಲೆ ಘಟನೆಯನ್ನು ಎಸ್ ಎಸ್ ಎಫ್ ದ.ಕ ವೆಸ್ಟ್ ಖಂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಹತ್ಯೆ ನಡೆದಿದೆ. ದುಡಿದು ತಿನ್ನುವ ಅಮಾಯಕ ಯುವಕ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುಪ್ರಚೋದನೆ ಭಾಷಣಗಳು ನಡೆಯುತ್ತಿದ್ದರೂ ಸರ್ಕಾರದ ಮೌನವಾಗಿ ಕುಳಿತ ಕಾರಣ ಈ ಹತ್ಯೆ ನಡೆದಿದೆ. ಈ ಹತ್ಯೆಯ ಸಂಪೂರ್ಣ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕಾದರೆ ಕೋಮು ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕಾಗಿದೆ. . ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕೋಮು ಪ್ರಚೋದನೆ ಭಾಷಣಗಳಿಗೆ ಕಡಿವಾಣ ಹಾಕಲಿ ಹಾಗೂ ಅಮಾಯಕ ಅಬ್ದುಲ್ ರಹಿಮಾನ್ ಹತ್ಯೆಯ ಅಪರಾಧಿಗಳಿಗೆ ಅರ್ಹ ಶಿಕ್ಷೆಯಾಗುವಂತೆ ಮಾಡಲಿ ಎಂದು ಪ್ರಕಟಣೆಯಲ್ಲಿ ಎಸ್ ಎಸ್ ಎಫ್ ದ.ಕ ವೆಸ್ಟ್ ಆಗ್ರಹಿಸಿದೆ.