×
Ad

ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ರೆಡ್ ಕ್ಯಾಮಲ್ ಆಂಗ್ಲ ಮಾಧ್ಯಮ ಶಾಲೆ ಟೀಮ್ ಚಾಂಪಿಯನ್

Update: 2023-09-16 12:32 IST

ಮೂಡುಬಿದಿರೆ, ಸೆ.16: ಇಲ್ಲಿನ ಸಮಾಜ ಮಂದಿರದಲ್ಲಿ ದಿನಾಂಕ ಇತ್ತೀಚೆಗೆ ಶೋರಿನ್ ರಿಯೂ ಕರಾಟೆ ಅಸೋಸಿಯೇಶನ್ ನೇತೃತ್ವದಲ್ಲಿ ಸ್ವಾಮೀಸ್ ಸ್ಟ್ರೆಂಥ್ ಟ್ರೈನಿಂಗ್ ಸೆಂಟರ್ ಹಾಗೂ ಎಂ.ಕೆ.ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ಸಹಯೋಗದಲ್ಲಿ ಆಯೋಜಿಸಿದ್ದ 20ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೆಲ್ ರಾಯ್, ಮಂಗಳೂರಿನ ರೆಡ್ ಕ್ಯಾಮಲ್ ಆಂಗ್ಲ ಮಾಧ್ಯಮ ಶಾಲೆ ಟೀಮ್ ಚಾಂಪಿಯನ್, ಬರಕಾ ಇಂಟರ್ ನ್ಯಾಶನಲ್ ಸ್ಕೂಲ್ ಮಂಗಳೂರು ರನ್ನರ್ ಅಪ್ ಹಾಗೂ ಮಂಗಳೂರಿನ ಶಫರ್ಡ್ ಇಂಟರ್ ನ್ಯಾಶನಲ್ ಅಕಾಡಮಿ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಗಳಿಸಿವೆ.

ಈ ಚಾಂಪಿಯನ್ ಶಿಪ್ ನಲ್ಲಿ ರಾಜ್ಯದ ಸುಮಾರು ವಿವಿಧ ಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಎಂ.ಕೆ.ಅನಂತ್ ರಾಜ್ ಕಾಲೇಜ್ ಆಫ್ ಫಿಸಿಕಲ್ ಎಜುಕೇಶನ್ ನ ಪ್ರಾಂಶುಪಾಲ ಧನಂಜಯ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಅಬುಲ್ ಆಲ ಪುತ್ತಿಗೆ, ಮೂಡುಬಿದಿರೆ ಪ್ರೆಸ್ ಕ್ಲಬ್ ನ ಶೀತರಾಂ ಆಚಾರ್ಯ, ಶೋರಿನ್ ರಿಯೂ ಕರಾಟೆ ಸಂಸ್ಥೆಯ ಮುಖ್ಯ ಶಿಕ್ಷಕ ಮುಹಮ್ಮದ್ ನದೀಮ್, ಸಂಘಟಕ ರಾಜೇಶ್, ಸ್ವಾಮಿಪ್ರಸಾದ್ ಸತೀಶ್ ಬೆಳ್ಮಣ್, ರವಿ ಸಾಲ್ಯಾನ್, ಸಫ್ರಾಝ್, ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News