×
Ad

ರಾಜ್ಯಮಟ್ಟದ ರಾಯ್ಯಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌: ಮಂಗಳೂರಿನ ಶಾಮಿಲ್‌ಗೆ 2 ಚಿನ್ನದ ಪದಕ

Update: 2023-08-26 20:19 IST

ಮಂಗಳೂರು : ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ (ರಿ) ವತಿಯಿಂದ ಆಗಸ್ಟ್ 17ರಿಂದ 20ರವರೆಗೆ ಬೆಂಗಳೂರಿನ ಚೆನ್ನಮ್ಮನ ಕೆರೆ ಸ್ಕೇಟಿಂಗ್ ರಿಂಕ್‌ನಲ್ಲಿ ನಡೆದ 2ನೇ ರಾಜ್ಯಮಟ್ಟದ ರಾಯ್ಯಕಿಂಗ್ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 14-17 ವರ್ಷ ಪ್ರಾಯದ ಬಾಲಕರ ಇನ್‌ಲ್ಲೈನ್ ವಿಭಾಗದಲ್ಲಿ ಮಂಗಳೂರಿನ ಶಾಮಿಲ್ 1000 ಮೀಟರ್ ರಿಂಕ್ ರೇಸ್ ಹಾಗೂ 200 ಮೀಟರ್ ಡ್ಯುಯಲ್ ಟಿಟಿಯಲ್ಲಿ 2 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿಯಲ್ಲಿ ಮೋಹನ್ ದಾಸ್ ಅವರಿಂದ ತರಬೇತಿ ಪಡೆಯುತ್ತಿರುವ ಶಾಮಿಲ್ ಯೆನೆಪೋಯ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಹಾಗೂ ಹೈ ಫೈರ್ಯಸ್ ಸ್ಕೇಟಿಂಗ್ ಕ್ಲಬ್‌ನ ಸದಸ್ಯರಾಗಿರುವರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News