ಬೀದಿ ನಾಯಿಗಳ ಹಾವಳಿ: ಉಳ್ಳಾಲ ನಗರಸಭೆಗೆ ಮನವಿ ಸಲ್ಲಿಸಿದ ನಿಯೋಗ
Update: 2024-09-08 23:15 IST
ಉಳ್ಳಾಲ: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು , ಇದರಿಂದ ಜನಸಾಮಾನ್ಯರು, ಶಾಲಾ ಮಕ್ಕಳು, ಪ್ರವಾಸಿಗರು ಭಯದಿಂದ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಯುಟಿಸ್ ಫ್ಯಾನ್ ಕ್ಲಬ್ ನಿಯೋಗ ನಗರ ಸಭೆ ಪೌರಾಯುಕ್ತ ಮತಡಿ ಅವರಿಗೆ ಮನವಿ ಸಲ್ಲಿಸಿದೆ.
ಇತ್ತೀಚಿನ ದಿನಗಳಲ್ಲಿ ಭಗವತಿ ರಸ್ತೆಯಲ್ಲಿ ಶಾಲಾ ವಿದ್ಯಾರ್ಥಿ ಗಳಿಗೆ ಹಾಗೂ ವೃದ್ಧನಿಗೂ ನಾಯಿ ಕಚ್ಚಿದ ಘಟನೆ ನಡೆದಿದೆ. ಮುಂದಿನ ದಿನಗಳಲ್ಲಿ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಇಂತಹ ಘಟನೆ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮೂಲಕ ಒತ್ತಾಯಿಸಿದೆ.
ನಿಯೋಗದಲ್ಲಿ ಯುಟಿಸ್ ಫ್ಯಾನ್ ಕ್ಲಬ್ ರಾಜ್ಯಾಧ್ಯಕ್ಷ ನಝೀರ್ ಬಾರ್ಲಿ, ಪ್ರಧಾನ ಕಾರ್ಯದರ್ಶಿ ಮಲಿಕ್ ಹಮೀದ್, ಕನ್ವಿನರ್ ಮೊಯ್ಯದ್ದೀನ್, ರಶೀದ್ ಕೋಡಿ, ಮನ್ಸೂರ್ ಮಂಚಿಲ, ಝಿಯಾದ್ ಮುಕ್ಕಚೇರಿ ಉಪಸ್ಥಿತರಿದ್ದರು.