ಬೊಳ್ಳಾಯಿ: ನಾಳೆ (ಜೂ.22) ವಿದ್ಯಾರ್ಥಿ ಒಕ್ಕೂಟದ ಚುನಾವಣೆ
Update: 2025-06-21 15:18 IST
ಮಂಗಳೂರು - ಬದ್ರಿಯಾ ಜುಮಾ ಮಸೀದಿ ಬೊಳ್ಳಾಯಿ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ ಇದರ ವಿದ್ಯಾರ್ಥಿಗಳ ಅಧಿಕೃತ ಒಕ್ಕೂಟ ಸುನ್ನೀ ಬಾಲ ಸಂಘ (SBS) ಇದರ ನೂತನ ಸಮಿತಿಗೆ ಚುನಾವಣೆ ಪ್ರಕ್ರಿಯೆಯು ನಾಳೆ (ಜೂ.22) ಮುಂಜಾನೆ 9 ಘಂಟೆಗೆ ಸರಿಯಾಗಿ ಆರಂಭಗೊಳ್ಳಲಿದ್ದು "ಉತ್ತಮ ಸಮಾಜದ ಉದಾತ್ತ ಪ್ರಜೆಗಳಾಗೋಣ" ಎಂಬ ಸಂದೇಶದೊಂದಿಗೆ ಚುನಾವಣೆ ನಡೆಯಲಿದೆ.
4 ಕ್ಯಾಬಿನೆಟ್ ದರ್ಜೆಗೆ 18 ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, 5ನೇ ತರಗತಿ ಮೇಲಿನ ಎಲ್ಲಾ ವಿದ್ಯಾರ್ಥಿಗಳು ಮತ ಚಲಾಯಿಸಲಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಫಿಲ್ ಇಸ್ಮಾಯಿಲ್ ಹನೀಫಿ ಕನ್ಚಿಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ