ಸುಬ್ರಹ್ಮಣ್ಯ: ಆಂಬ್ಯುಲೆನ್ಸ್ ಚಾಲಕ ನಾಪತ್ತೆ
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಜು.22 ರಂದು ನಾಪತ್ತೆ ಆಗಿದ್ದು ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊನ್ನಪ್ಪ ಅವರು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಂಬ್ಯಲೆನ್ಸ್ ವಾಹನದ ಚಾಲಕನಾಗಿ ಕೆಲಸ ಮಾಡಿಕೊಂಡಿರುವ ಅವರು ಜು.22ರಂದು ಕರ್ತವ್ಯಕ್ಕೆಂದು ಮನೆಯಿಂದ ಬೆಳಗ್ಗೆ ಹೋಗಿದ್ದು, ಆಸ್ಪತ್ರೆಗೆ ತೆರಳಿ ಅಲ್ಲಿ ರಜೆ ಎಂದು ತಿಳಿಸಿದ್ದು, ಅವರ ಸ್ಕೂಟರ್ ನ್ನು ಅಲ್ಲೇ ಬಿಟ್ಟು ಅಲ್ಲಿಂದ ನಾಪತ್ತೆಯಾ ಗಿದ್ದರು. ಪತಿ ಮನೆಯಲ್ಲಿ ಮೊಬೈಲ್ ಬಿಟ್ಟು ಹೋಗಿರುವುದರಿಂದ ಆಸ್ಪ್ರೆಗೆ ಪತ್ನಿ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವೇಳ ಹೊನ್ನಪ್ಪ ಅವರು ಸ್ಕೂಟರ್ ಬಿಟ್ಟು ತೆರಳಿರುವ ಬಗ್ಗೆ ತಿಳಿಸಲಾಗಿದೆ. ಮಧ್ಯಾಹ್ನವಾದರೂ ಹೊನ್ನಪ್ಪ ಅವರು ಮನೆಗೆ ಬಾರದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಲಾಯಿತು. ಹಾಗೂ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಲಾಯಿತು.
ಹೊನ್ನಪ್ಪ ಅವರು ಸುಬ್ರಹ್ಮಣ್ಯ ಅಗ್ರಹಾರ ಬಳಿಯಿಂದ ಕುಮಾರಧಾರ ಬಳಿಗೆ ಓಡಿಕೊಂಡು ಹೋಗುತ್ತಿ ರುವ ದೃಶ್ಯ ಸಿಸಿಕೆಮರಾದಲ್ಲಿ ಸೆರೆಯಾಗಿದ್ದು, ಈ ಹಿನ್ನಲೆಯಲ್ಲಿ ಅವರು ಕುಮಾರಧಾರ ನದಿಗೆ ಹಾರಿರುವ ಶಂಕೆ ಹಿನ್ನಲೆಯಲ್ಲಿ ನದಿಯಲ್ಲಿ ಹುಡುಕಾಟ ಆರಂಭಿಸಲಾಗಿದೆ. ಎಸ್.ಡಿ.ಆರ್.ಎಫ್. ತಂಡ, ಅಗ್ನಿಶಾಮಕ ದಳ, ಸ್ಥಳೀಯರು ನದಿಯಲ್ಲಿ ಶೋಧ ಕಾರ್ಯ ನಡೆಸಿದರು. ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವೂ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದರೂ, ಯಾವುದೇ ಸುಳಿವೂ ರಾತ್ರಿವರೆಗೆ ಲಭಿಸಿಲ್ಲ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೊನ್ನಪ್ಪ ಅವರ ಮನೆಗೆ ಭೇಟಿ ನೀಡಿ ಪತ್ನಿಗೆ ಸಾಂತ್ವಾನ ತಿಳಿಸಿ, ಪೊಲೀಸರಿಂದ ಮಾಹಿತಿ ಪಡೆದರು. ಸುಬ್ರಹ್ಮಣ್ಯ ಎಸೈ ಕಾರ್ತಿಕ್ ಮತ್ತಿತರರು ಘಟನಾ ಸ್ಥಳದಲ್ಲಿದ್ದರು.