ಸುಬ್ರಹ್ಮಣ್ಯ | ಕುಮಾರ ಪರ್ವತ ಚಾರಣ ಮತ್ತೆ ಆರಂಭ
Update: 2023-09-30 21:30 IST
ಚಾರಣಿಗರು ಜಮಾಯಿಸಿರುವುದು
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತಕ್ಕೆ ಪ್ರತಿ ವರ್ಷ ಚಾರಣಿಗರ ಸಂಖ್ಯೆ ಜಾಸ್ತಿ ಇರುತ್ತದೆ. ಈ ವರ್ಷ ಮೇ ತಿಂಗಳಿನಿಂದ ಅರಣ್ಯ ಇಲಾಖೆಯವರು ಚಾರಣಕ್ಕೆ ಪ್ರವಾಸಿಗರಿಗೆ /ಚಾರಣಿಗರಿಗೆ ನಿರ್ಬಂಧ ಹೇರಿದ್ದರು. ಇದೀಗ ನಿರ್ಬಂಧ ಮುಕ್ತಗೊಳಿಸಿ ಚಾರಣಿಗರಿಗೆ ಅರಣ್ಯ ಇಲಾಖೆಯವರು ಅವಕಾಶ ನೀಡಿರುತ್ತಾರೆ.
ಅದರಂತೆ ಶನಿವಾರದಿಂದ ಮತ್ತೆ ಕುಮಾರ ಪರ್ವತ ಚಾರಣ ಆರಂಭಗೊಂಡಿದೆ. ಮೊದಲ ದಿನವಾದ ಶನಿವಾರ ಸುಮಾರು 750ಕ್ಕೂ ಅಧಿಕ ಚಾರಣಿಗರು ಜಮಾಯಿಸಿದ್ದರು. ವಿವಿಧ ಊರುಗಳಿಂದ ಅದರಲ್ಲೂ ಹೆಚ್ಚಾಗಿ ಬೆಂಗಳೂರಿನಿಂದ ಬಂದವರ ಸಂಖ್ಯೆಯೇ ಜಾಸ್ತಿ. ಚಾರಣಿಗರು ತಮಗೆ ಬೇಕಾದ ಟೆಂಟ್, ಆಹಾರ ಪದಾರ್ಥಗಳು, ನೀರಿನ ಪಟ್ಟಣಗಳನ್ನ ತಮ್ಮ ಜೊತೆಯಲ್ಲಿ ಒಯ್ಯುತ್ತಿರುವುದು ಸಾಮಾನ್ಯವಾಗಿದೆ.
ಚಾರಣ ಸಂದರ್ಭದಲ್ಲಿ ಸ್ವಚ್ಛತೆಯನ್ನ ಕಾಪಾಡಲು ಅರಣ್ಯ ಇಲಾಖೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಲ್ಲಲ್ಲಿ ಸೂಚನಾ ಫಲಕಗಳನ್ನು ಕೂಡ ಹಾಕಲಾಗಿದೆ.