×
Ad

ಸುಳ್ಯ| ಕೆವಿಜಿ ಕ್ಯಾಂಪಸ್‍ನಲ್ಲಿ ಡಿಜೆ ಸೌಂಡ್ಸ್ ಬಳಸಿ ಗಣೇಶೋತ್ಸವ ಮೆರವಣಿಗೆ: ಪ್ರಕರಣ ದಾಖಲು

Update: 2025-08-28 21:09 IST

ಸುಳ್ಯ: ಕೆವಿಜಿ ಕ್ಯಾಂಪಸ್‍ನಲ್ಲಿ ಡಿಜೆ ಸೌಂಡ್ಸ್ ಬಳಸಿ ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಮಾಡುವ ಮೂಲಕ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯ ಕ್ಯಾಂಪಸ್‍ನ ಗಣೇಶೋತ್ಸವ ಆಚರಣೆ ವೇಳೆ ಬುಧವಾರ ಸಂಜೆ ಕೆವಿಜಿ ಮೆಡಿಕಲ್ ಕಾಲೇಜು ಕಡೆಯಿಂದ ಕೆವಿಜಿ ಜಂಕ್ಷನ್ ಮುಖಾಂತರ ಕೆವಿಜಿ ಕಾಲೇಜು ಕಡೆಗೆ ಗಣೇಶನ ಮೆರವಣಿಗೆ ಮಾಡುವ ವೇಳೆ ಪಿಕಪ್ ವಾಹನದಲ್ಲಿ ಡಿಜೆ ಸೌಂಡ್ಸ್ ಬಳಸಿ ಮೆರವಣಿಗೆ ಮಾಡಿ ಸಾರ್ವಜನಿಕ ರಸ್ತೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.

ಕೆವಿಜಿ ಕ್ಯಾಂಪಸ್ ಗಣೇಶೋತ್ಸವ ಸಮಿತಿ ಆಯೋಜಕರಾದ ರಜತ್ ಅಡ್ಕಾರ್, ಸಮಿತಿಯ ಕೌಶಲ್, ಡಿಜೆ ಸೌಂಡ್ಸ್ ಮಾಲಕ ಚಿಂತನ್, ವಾಹನ ಚಾಲಕ ದೇವಿಕಿರಣ್, ಸಹಾಯಕ ವಿನಿತ್ ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News