×
Ad

ಭಾರೀ ಮಳೆ : ಪೆರುವಾಜೆ ದೇವಸ್ಥಾನದ ಒಳಾಂಗಣಕ್ಕೆ ನುಗ್ಗಿದ ಮಳೆ ನೀರು

Update: 2025-05-31 23:47 IST

ಸುಳ್ಯ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಒಳಾಂಗಣಕ್ಕೆ ಮಳೆ ನೀರು ನುಗ್ಗಿದೆ.

ಮಳೆ ನೀರಿನಿಂದ ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣ ನೀರಿನಿಂದ ಜಲಾವೃತಗೊಂಡಿತ್ತು.

ನೀರಿನ ಪ್ರವಾಹಕ್ಕೆ ಸಿಲುಕಿದ ವೃದ್ದೆಯ ರಕ್ಷಣೆ :

ಪೆರುವಾಜೆ ಗೌರಿಹೊಳೆ ಸಮೀಪ ನಾಗನಮಜಲು ಎಂಬಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿದ್ದು ಮನೆಯೊಳಗಿದ್ದ ವೃದ್ಧೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಮನೆಯೊಳಗಿದ್ದ ವೃದ್ಧೆಯೊಬ್ಬರೇ ವಾಸಿಸುತ್ತಿದ್ದು ರಾತ್ರಿ ಸುರಿದ ವಿಪರೀತ ಮಳೆಗೆ ಮಳೆ ನೀರು ಮನೆಯೊಳಗೆ ನುಗ್ಗಿತ್ತು. ವಿಷಯ ತಿಳಿದ ಸ್ಥಳೀಯರಾದ ಮೋನಪ್ಪ ನಾಗನಮಜಲು. ವಿಶ್ವನಾಥ ಪೆಲತ್ತಡ್ಕ. ವಸಂತ ನಾಗನಮಜಲು. ಚರಣ್ ಕಲ್ಮಡ್ಕ. ಸಿಂಚನ್ ಕಾನಾವು, ದಾಮೋದರ ಪೆಲತಡ್ಕ. ಶ್ರೀದರ ನಾಗನಮಜಲು, ಚಿದಾನಂದ ಬಜ ಎಂಬವರು ವೃದ್ಧೆಯನ್ನು ಬೇರೆ ಮನೆಗೆ ಸ್ಥಳಾಂತರಿಸಿದರು. ಪ್ರವಾಹದಲ್ಲಿ ಸಿಲುಕಿದ ಮಹಿಳೆಗೆ ಉಳಿದುಕೊಳ್ಳಲು ರಾಮಣ್ಣ ನಾಯ್ಕ ಎಂಬವರ ಮನೆಯಲ್ಲಿ ವ್ಯವಸ್ಥೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News