×
Ad

ಸುಳ್ಯ | ಆನೆಗುಂಡಿ ವ್ಯಾಪ್ತಿಯಲ್ಲಿ ಕಸ ಎಸೆತ : ಕನಕಮಜಲು ಗ್ರಾಮ ಪಂಚಾಯತ್‌ನಿಂದ ದಂಡ

Update: 2025-11-16 23:54 IST

ಸುಳ್ಯ, ನ.16: ಕನಕಮಜಲು ಗ್ರಾಪಂ ವ್ಯಾಪ್ತಿಯ ಆನೆಗುಂಡಿ ಎಂಬಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚಿದ ಪಂಚಾಯತ್ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು, ಕಸ ಎಸೆದವರನ್ನು ಕರೆಸಿ ದಂಡ ವಿಧಿಸಿ ಮುಚ್ಚಳಿಕೆ ಬರೆಸಿ ಕಳುಹಿಸಿ ಕೊಟ್ಟ ಘಟನೆ ಶನಿವಾರ ನಡೆದಿದೆ.

ಹಲವು ಸಮಯಗಳಿಂದ ಆನೆಗುಂಡಿ ಪ್ರದೇಶದ ರಸ್ತೆ ಬದಿ ಕಸದ ರಾಶಿ ಆಗಾಗ್ಗೆ ಬೀಳುತಿತ್ತು. ಗ್ರಾಮ ಸಭೆಯಲ್ಲಿ, ಸಾಮಾನ್ಯ ಸಭೆಯಲ್ಲಿ ಕಸ ಎಸೆದವರನ್ನು ಪತ್ತೆ ಹಚ್ಚುವಂತೆ ಆಗ್ರಹ ವ್ಯಕ್ತವಾ

ಗಿತ್ತು. ಕಸ ಹಾಕುವರನ್ನು ಪತ್ತೆ ಹಚ್ಚುವ ಸಲುವಾಗಿ ಆನೆಗುಂಡಿ ಪ್ರದೇಶಕ್ಕೆ ತೆರಳಿದ ಪಂಚಾಯತ್ ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಪಂಚಾಯತ್ ಪ್ರಭಾರ ಪಿಡಿಒ ಬಾಬು ನಾಯ್ಕ ಹಾಗೂ ಸಿಬ್ಬಂದಿ ತೆರಳಿ ಪರಿಶೀಲನೆ ನಡೆಸಿದರು.

ಈ ವೇಳೆ ಆರ್ಲಪದವಿನ ವ್ಯಕ್ತಿಯೊಬ್ಬರ ಮನೆಯ ವಿಳಾಸವಿರುವ ಕವರ್, ಪುಸ್ತಕ ಲಭ್ಯವಾದವು. ಆ ಆಧಾರದಲ್ಲಿ ಪಂಚಾಯತ್‌ನಿಂದ ಅವರನ್ನು ಸಂಪರ್ಕಿಸಿ, ಕರೆಸಲಾಯಿತು.

ಬಳಿಕ ವಿಚಾರಿಸಿದಾಗ ಕಸ ತಾನು ತಂದು ಎಸೆದಿಲ್ಲ. ಯಾರೋ ಇಲ್ಲಿ ಎಸೆದಿದ್ದಾರೆಂದು ಹೇಳಿದರೆನ್ನಲಾ

ಗಿದೆ. ಕನಕಮಜಲು ಪಂಚಾಯತ್ ವತಿಯಿಂದ 4,500 ರೂ. ದಂಡ ಹಾಕಿ ಅವರಿಂದಲೇ ಕಸವನ್ನು ತೆರವುಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News