×
Ad

ಸುಳ್ಯ: ಅಪ್ರಾಪ್ತ ಬಾಲಕ ಆತ್ಮಹತ್ಯೆ

Update: 2023-08-01 10:53 IST

ಸುಳ್ಯ: ಅಪ್ರಾಪ್ತ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಂತೋಡು ಗ್ರಾಮದ ಬಿಳಿಯಾರಿನಲ್ಲಿ ಮಂಗಳವಾರ (ಆಗಸ್ಟ್ 1) ನಡೆದಿರುವ ಬಗ್ಗೆ ವರದಿಯಾಗಿದೆ.

ಬಾಲಕನನ್ನು  ಬಿಳಿಯಾರಿನ ದಿ. ಮೂಸಾ ಎನ್ನುವವರ ಪುತ್ರ ಹನ್ಸೀಫ್ (17) ಎಂದು ಗುರುತಿಸಲಾಗಿದೆ.

ಬಾಲಕನ ತಾಯಿ ಶಮೀರಾ ಮಗಳ ಚಿಕಿತ್ಸೆಗಾಗಿ ಕ್ಯಾಲಿಕೆಟ್ ಗೆ ತೆರಳಿದ್ದರು. ಈ ಸಂದರ್ಭ ಬಾಲಕ ಮನೆಯಲ್ಲಿ ಒಬ್ಬನೇ ಇದ್ದು ರಾತ್ರಿ ವೇಳೆ ತನ್ನ ಅಜ್ಜಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ. ಇಂದು ಬೆಳಿಗ್ಗೆ ಬಾಲಕನ ಮನೆಗೆ ಆತನ ಮಾವ ಬಂದಾಗ ಹನ್ಸಿಪ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. 

 ಬಾಲಕ ಶಾಲೆಬಿಟ್ಟು ತಿರುಗಾಡುತ್ತಿದ್ದು ,ಮನೆಯವರು ಆತನಿಗೆ ಶಾಲೆಗೆ ತೆರಳುವಂತೆ ಬುದ್ದಿ ಹೇಳುತ್ತಿದ್ದರು ಎನ್ನಲಾಗಿದ್ದು, ಶಾಲೆಗೆ ತೆರಳಲು ಮನಸ್ಸಿಲ್ಲದೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News