×
Ad

ಸುಳ್ಯ: ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆ

Update: 2024-09-03 11:16 IST

ಸುಳ್ಯ: ಇಲ್ಲಿನ ಕಾಂತಮಂಗಲ ಬಳಿ ಪಯಸ್ವಿನಿ ನದಿಗೆ ಹಾರಿದ್ದ ಯುವಕನ ಮೃತದೇಹ ಪತ್ತೆಯಾಗಿದೆ. ಮೃತ ಯುವಕನನ್ನು ಅಜ್ಜಾವರ ಗ್ರಾಮದ ಮಾವಿನಪಳ್ಳ ನಿವಾಸಿ‌ ಮಹಮ್ಮದ್ ಎಂಬವರ ಪುತ್ರ ಸಿನಾನ್ (30) ಎಂದು ಗುರುತಿಸಲಾಗಿದೆ.

 ಸಿನಾನ್ ಮಾನಸಿಕ ಅಸ್ವಸ್ಥನಾಗಿದ್ದ ಎನ್ನಲಾಗುತ್ತಿದ್ದು,  ಈ ಹಿಂದೆಯೂ ಆತ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರ ಸುಳ್ಯಕ್ಕೆ ತೆರಳಿದ್ದ ಈತ ಮನೆಗೆ ಮರುಳುವ ಸಂದರ್ಭದಲ್ಲಿ ಕಾಂತಮಂಗಲ ಸೇತುವೆಯಿಂದ ನದಿಗೆ ಧುಮುಕಿದ್ದಾನೆ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ಕೂಡಲೇ ಆತನಿಗಾಗಿ ಹುಡುಕಾಟ ಪ್ರಾರಂಭಿಸಲಾಗಿದ್ದು, ಮಂಗಳವಾರ ಮುಂಜಾನೆ  ಮೃತದೇಹ ಪತ್ತೆಯಾಗಿದೆ. 

ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News