×
Ad

ಸುಳ್ಯ : ನೇಣು ಬಿಗಿದು ನರ್ಸ್ ಆತ್ಮಹತ್ಯೆ

Update: 2023-09-05 22:27 IST

ಸುಳ್ಯ : ಪತಿ ಸಾವಿಗೀಡಾದ 15 ದಿನದಲ್ಲೇ ನರ್ಸ್ ಆಗಿರುವ ಪತ್ನಿ ಕೂಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆರಾಜೆಯಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ರೂಪಾ (30) ಎಂದು ಗುರುತಿಸಲಾಗಿದೆ.

ರೂಪಾ ಅವರು ಮೂಲತಃ ಕೊಡಗು ಜಿಲ್ಲೆಯ ಪೆರಾಜೆಯವರು. ಎರಡು ವರ್ಷಗಳ ಹಿಂದೆ ಅವರನ್ನು ಸವಣೂರಿನ ಪೆರಿಯಡ್ಕಕ್ಕೆ ಮದುವೆ ಮಾಡಿಕೊಡಲಾಗಿತ್ತು. ಕಳೆದ ಹದಿನೈದು ದಿನಗಳ ಹಿಂದೆ ಈಕೆಯ ಗಂಡ ತೀರಿಕೊಂಡಿದ್ದರು. ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೊಡಗು ಪೊಲೀಸರು ಸ್ಥಳಕ್ಕೆ ಆಗಮಿಸಿ ಕೇಸು ದಾಖಲಿಸಿಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News