×
Ad

ಸುಳ್ಯ: ಯುವಕನ ಮೇಲೆ ಆಟೊ ಚಾಲಕ ಮತ್ತು ಪ್ರಯಾಣಿಕರಿಂದ ಹಲ್ಲೆ ಆರೋಪ; ಪ್ರಕರಣ ದಾಖಲು

Update: 2023-09-19 21:31 IST

ಸುಳ್ಯ: ಯುವಕನ ಮೇಲೆ ಆಟೊ ಚಾಲಕ ಮತ್ತು ಪ್ರಯಾಣಿಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಳೆಗೇಟು ಸಮೀಪ ಮಡಿಕೇರಿಯ ಕಾರುಗುಂದ ಗ್ರಾಮದ ದರ್ಶನ್ ಎಂಬವರು ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.

ಸೆ. 18 ರಂದು ಸುಳ್ಯಕ್ಕೆ ಬಂದಿದ್ದ ದರ್ಶನ್ ರಾತ್ರಿ ಸುಮಾರು 11 ಗಂಟೆ ವೇಳಗೆ ಊರಿಗೆ ಹಿಂತಿರುಗುವ ಸಲುವಾಗಿ, ಸುಳ್ಯ ಬಸ್ಸು ನಿಲ್ದಾಣಕ್ಕೆ ತೆರಳಲು ಹಳೆಗೇಟಿನಲ್ಲಿ ಆಟೋರಿಕ್ಷಾ ವೊಂದನ್ನು ಹತ್ತಿದ್ದರು. ಈ ವೇಳೆ ಆಟೋದ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪ್ರಯಾಣಿಕರು ದರ್ಶನ್ ಆಟೋದಲ್ಲಿ ಕುಳಿತ ಕೂಡಲೇ ಚಾಲಕ ಹಾಗೂ ಅಟೋದಲ್ಲಿದ್ದ ಪ್ರಯಾಣಿಕರಿಬ್ಬರು ಸೇರಿ ಬ್ಯಾಗ್‍ನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಪ್ರತಿರೋಧ ತೋರಿದಾಗ ಆತನ ಮೇಲೆ ಹಲ್ಲೆ ನಡೆಸಿ, ಬ್ಯಾಗನ್ನು ಕಿತ್ತುಕೊಂಡು ರಿಕ್ಷಾದಿಂದ ದೂಡಿ ಹಾಕಿ ಆಟೋದಲ್ಲಿ ಪರಾರಿಯಾಗಿದ್ದಾರೆ ಎಂದು ದೂರಲಾಗಿದೆ. ದರ್ಶನ್ ಅವರ ಬ್ಯಾಗಿನಲ್ಲಿ ವ್ಯವಹಾರದ 3.5 ಲಕ್ಷ ರೂ, ಎರಡು ಮೊಬೈಲ್ ಫೋನ್, ವಿವಿಧ ಗುರುತಿನ ಚೀಟಿಗಳು, ಮೂರು ಎಟಿಎಂ ಕಾರ್ಡುಗಳು ಕಳವು ಆಗಿದೆ ಎಂದು ಸುಳ್ಯ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News